HEALTH TIPS

ಸ್ವಾವಲಂಭಿ ಭಾರತ: 'ಲೋಕಲ್' ಭಾರತವನ್ನು 'ಗ್ಲೋಕಲ್' ಆಗಿ ಪರಿವರ್ತಿಸಲು ವೆಂಕಯ್ಯ ನಾಯ್ಡು ಕರೆ

 
          ನವದೆಹಲಿ: ದೇಶದ ಪ್ರತಿ ನಾಗರಿಕ ಕೂಡ "ಸ್ಥಳೀಯ ಭಾರತ"ವನ್ನು "ಗ್ಲೋಕಲ್ ಇಂಡಿಯಾ" (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ 'ಸ್ವಾವಲಂಬಿ ಭಾರತ' ಅಭಿಯಾನ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.
            ಉಪರಾಷ್ಟ್ರಪತಿ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲಿಮೆಂಟ್ ಮೊಬೈಲ್ ಅಪ್ಲಿಕೇಶನ್‍ನ ವರ್ಚುವಲ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ವೃದ್ಧಿಗೆ ಸೂಕ್ತ ಪರಿಸರ ವ್ಯವಸ್ಥೆ ರಚಿಸಬೇಕೆಂದು ಕರೆ ನೀಡಿದರು.
           ಆಧುನಿಕ ತಂತ್ರಜ್ಞಾನ, ಮಾನವ ಸಂಪನ್ಮೂಲದ ಸದ್ಭಳಕೆ, ಪೂರೈಕೆ ಸರಣಿಯನ್ನು ರಚಿಸುವ ಮೂಲಕ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ದೇಶದ ಆರ್ಥಿಕ ಸಾಮಥ್ರ್ಯಕ್ಕೆ ಒತ್ತು ನೀಡುವುದು ಸ್ವಾವಲಂಬಿ ಭಾರತ ಅಭಿಯಾನದ ಉದ್ದೇಶ ಎಂದರು.
        ಸ್ವಾವಲಂಬಿ ಭಾರತ' ಅಭಿಯಾನ ಯಾವುದೇ ರಕ್ಷಣಾತ್ಮಕತೆ ಅಥವಾ ಪ್ರತ್ಯೇಕತೆಯ ಕರೆಯಲ್ಲ, ಆದರೆ ಉದ್ಯಮಶೀಲತೆಯನ್ನು ಬೆಳೆಸುವ, ನಾವೀನ್ಯತೆಯನ್ನು ಪೆÇೀಷಿಸುವ ಮತ್ತು ಗ್ರಾಮೀಣ ಮತ್ತು ನಗರದ ಸಹಜೀವನದ ಅಭಿವೃದ್ಧಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಯೋಜನೆಯಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries