ಬದಿಯಡ್ಕ: ಮಂಗಳವಾರ ರಾತ್ರಿ ನಿಧನರಾದ ಕುಂಬಳೆ ಸೀಮೆಯ ಪ್ರಧಾನ ತಂತ್ರಿವರ್ಯರೂ, ವೇದ-ಶಾಸ್ತ್ರ ಪಾರಾಂಗತರೂ ಆದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ(77) ಅವರ ಅಂತ್ಯ ವಿಧಿಗಳು ಬುಧವಾರ ಅಗಲ್ಪಾಡಿಯ ಅವರ ಸ್ವಗೃಹದ ಪರಿಸರದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಪುತ್ರ ಸಂತಾನವಿಲ್ಲದ ತಂತ್ರಿಗಳಿಗೆ ಇತ್ತೀಚೆಗೆ ದತ್ತುಪಡೆದ ಅನಿರುದ್ದ ತಂತ್ರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮೊದಲು ಸೀಮೆಯ ಸಕಲ ಮರ್ಯಾದೆಗಳನ್ನೂ ಸಮರ್ಪಿಸಿ ವಿದಾಯ ಪ್ರಾರ್ಥನೆ ಸಲ್ಲಿಸಲಾಯಿತು. ಕುಂಬಳೆ ಸೀಮೆಯ ವಿವಿಧೆಡೆಗಳ ಗಣ್ಯರು, ಕ್ಷೇತ್ರದ ಪ್ರಮುಖರು, ಜನಪ್ರತಿನಿಧಿಗಳು, ಅಭಿಮಾನಿಗಳು ಬೆಳಿಗ್ಗಿನಿಂದಲೇ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರನ್ನು ಸಂತೈಸಿದರು.


