HEALTH TIPS

ಇಲಿಜ್ವರ ಹರಡುವ ಸಾಧ್ಯತೆ: ಸಾರ್ವಜನಿಕರು ಜಾಗ್ರತೆ ಪಾಲಿಸಬೇಕು: ಜಿಲ್ಲಾ ವೈದ್ಯಾಧಿಕಾರಿ

               ಕಾಸರಗೋಡು: ಮಳೆಗಾಲ ಬಿರುಸುಗೊಂಡಿದ್ದು, ಕಾಸರಗೋಡು ಜಿಲೆಯಲ್ಲಿ ಇಲಿಜ್ವರ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಸಲಹೆಮಾಡಿದ್ದಾರೆ.
                      ಗಮನೀಯ ರೋಗ ಲಕ್ಷಣಗಳು:
          ನಿತ್ರಾಣದ ಜೊತೆಗೆ ಜ್ವರ, ತಲೆನೋವು, ಮಾಂಸಪೇಶಿಗಳಲ್ಲಿ ನೋವು ಇಲಿಜ್ವರದ ಲಕ್ಷಣಗಳಾಗಿವೆ. ಕಣ್ಣುಗಳಲ್ಲಿ ಕೆಂಪು ಬಣ್ಣ, ಮೂತ್ರದಲ್ಲಿ ಕೊರತೆ, ಹಳದಿಜ್ವರದ ಲಕ್ಷಣಗಳು ತೋರಬಹುದು. ಇಲಿ, ನಾಯಿ, ಜಾನುವಾರುಗಳ ಮೂತ್ರದ ಮೂಲಕ ಇಲಿಜ್ವರ ಹರಡುತ್ತದೆ. ಮೂತ್ರದ ಮೂಲಕ ಮಣ್ಣಿನಲ್ಲಿ, ನೀರಿನಲ್ಲಿ ರೋಗಾಣು ಬೆರೆಯುತ್ತದೆ. ಇಲ್ಲಿಂದ ಮಾನವದೇಹದ ಗಾಯಗಳ ಮೂಲಕ ಶರೀರ ಪ್ರವೇಶಿಸುತ್ತದೆ. ಗದ್ದೆ, ಚರಂಡಿ, ಕೆರೆ, ನೀರು ಕಟ್ಟಿ ನಿಂತಲ್ಲಿ ಕಾಯಕ ನಡೆಸುವವರಲ್ಲಿ ರೋಗ ತಗುಲುವ ಸಾಧ್ಯತೆ ಅಧಿಕವಾಗಿದೆ.
                              ಪ್ರತಿರೋಧ ಹೇಗೆ:
         ಜಾನುವಾರು ಸಾಕಣೆ ಇತ್ಯಾದಿ ನಡೆಸುವವರು ಕೈಗಳಿಗೆ ಗ್ಲೌಸ್, ಕಾಲುಗಳಿಗೆ ದೊಡ್ಡ ಗಾತ್ರದ ಬೂಟು(ಗಂ ಬೂಟ್) ಧರಿಸಬೇಕು. ನಾಯಿ, ಬೆಕ್ಕು ಸಹಿತ ಪ್ರಾಣಿಗಳ ಮಲಮೂತ್ರ ಶುಚೀಕರಣ ನಡೆಸುವ ವೇಳೆ ಸುರಕ್ಷತೆ ಬಗ್ಗೆ ಜಾಗರೂಕತೆ ವಹಿಸಬೇಕು. ಜಾನುವಾರುಗಳ ಮೂತ್ರ ನೀರಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳಬೇಕು. ಆಹಾರ, ಕುಡಿಯುವ ನೀರು ಇತ್ಯಾದಿಗಳಿಗೆ ಇಲಿಯ ಸ್ಪರ್ಶ, ಮೂತ್ರ ಸೇರದಂತೆ ಜಾಗರೂಕತೆ ವಹಿಸಬೇಕು, ಇವು ಸದಾ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಕಟ್ಟಿ ನಿಂತಿರುವ ನೀರಿನಲ್ಲಿ ಮಕ್ಕಳು ಆಟಕ್ಕಿಳಿಯದಂತೆ (ವಿಶೇಷವಾಗಿ ಶರೀರದಲ್ಲಿ ಗಾಯಗಳಿದ್ದಾಗ) ನೋಡಿಕೊಳ್ಳಬೇಕು. ಆಹಾರಪದಾರ್ಥಗಳನ್ನು ಎಲ್ಲೆಂದರಲ್ಲಿ ಚೆಲ್ಲುವ ಮೂಲಕ ಇಲಿಗಳು ಆಕರ್ಷಿತರಾಗುವಂತೆ ಮಾಡಬಾರದು.                       
                          ಪ್ರತಿರೋಧ ಗುಳಿಗಳ ಸೇವನೆ:
         ಶುಚೀಕರಣ ಕಾಯಕಗಳಲ್ಲಿ ತೊಡಗಿಕೊಂಡವರು, ಮಲಿನಜಲದ ಸಂಪರ್ಕದಲ್ಲಿರುವವರು, ನೌಕರಿ ಖಾತರಿ ಯೋಜನೆಯಲ್ಲಿರುವವರು, ಕೃಷಿ ಕೆಲಸ ನಡೆಸುವವರು ಪ್ರತಿರೋಧ ಗುಳಿಗೆಗಳನ್ನು ಸೇವಿಸಬೇಕು. ಗುಳಿಗೆಗಳನ್ನು ಒಂದೇ ಡೋಸ್ ಒಂದು ವಾರಗಳ ಅವಧಿಗೆ ಮಾತ್ರ ಸುರಕ್ಷಾ ಸಾಮಥ್ರ್ಯ ಹೊಂದಿದೆ. ಜಿಲ್ಲೆಯ ಎಲ್ಲ ಸರಕಾರಿ, ಆರೋಗ್ಯ ಸಂಸ್ಥೆಗಳಲ್ಲಿ ಪ್ರತಿರೋಧ ಗುಳಿಗೆಗಳು ಉಚಿತವಾಗಿ ಲಭಿಸುತ್ತವೆ. ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಅಧಿಕೃತರು ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries