ಕಾಸರಗೋಡು : ಕೋವಿಡ್ ಸೋಂಕು ಪ್ರತಿರೋಧ ಅಂಗವಾಗಿ ಆರೋಗ್ಯ ಇಲಾಖೆ, ಕಾಸರಗೋಡು ಜಿಲ್ಲಾಡಳಿತೆ ತಿಳಿಸಿರುವ ನಿಯಂತ್ರಣಗಳನ್ನು ಉಲ್ಲಂಘಿಸುವರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇರವಾಗಿ ರಂಗಕ್ಕಿಳಿದಿದ್ದಾರೆ.
ಮೇಲ್ಪರಂಬದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಗುಂಪುಗೂಡಿದ್ದ ಆರೋಪದಲ್ಲಿ ಎರಡು ಅಂಗಡಿಗಳ ಮಾಲೀಕರ ವಿರುದ್ಧ, 8 ಮಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. 8 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕೇರಳ ಅಂಟುರೋಗ ನಿಯಂತ್ರಣ ಆರ್ಡಿ ನೆನ್ಸ್ ಪ್ರಕಾರ ಕೇಸು ದಾಖಲಿಸಲು ಮೇಲ್ಪರಂಬ ಠಾಣೆ ಪೆÇಲೀಸರಿಗೆ ಅವರು ಆದೇಶ ನೀಡಿದ್ದಾರೆ. ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಸುಮಾರು ಹತ್ತು ವಾಹನಗಳನ್ನು ಜಿಲ್ಲಾಧಿಕಾರಿ ನೇರವಾಗಿ ವಶಕ್ಕೆ ತೆಗೆದುಕೊಂಡರು.
ಇದೇ ಪ್ರಕರಣಗಳಿಗೆ ಸಂಬಂಧಿಸಿ ಚೆಮ್ನಾಡಿನಲ್ಲಿ ಒಬ್ಬ ಅಂಗಡಿ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದೆ. 8 ವಾಹನಗಳನ್ನು ವಶಪಡಿಸಲಾಗಿದೆ. 8 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.


