ಕಾಸರಗೋಡು: ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯಕ್ಕೆ ಹೊಸಹುರುಪು ನೀಡುವ ನಿಟ್ಟಿನಲ್ಲಿ ನೀಲೇಶ್ವರ ದಲ್ಲಿ ವಿಶಾಲವಾದ ಸೌಲಭ್ಯಗಳೊಂದಿಗೆ ಇ.ಎಂ.ಎಸ್.ಸ್ಟೇಡಿಯಂ ನಿರ್ಮಾಣ ಪೂರ್ಣತೆಯತ್ತ ದಾಪುಗಾಲು ಇರಿಸುತ್ತಿದೆ.
ಕಾಮಗಾರಿಯ ಕೊನೆಯ ಹಂತ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಜಿಲ್ಲಾ ಕ್ರೀಡಾಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ತಿಳಿಸಿದರು.
ಕಿಫ್ ಬಿ ಮೂಲಕ ಯೋಜನೆಗಾಗಿ 17.02 ಕೋಟಿ ರೂ. ಮಂಜೂರುಗೊಂಡಿದೆ. 20.76 ಕೋಟಿ ರೂ.ನ ಆಡಳಿತೆ ಮಂಜೂರಾತಿ ಲಭಿಸಿದೆ.
ಫುಟ್ ಬಾಲ್ ಮೈದಾನ, ಗ್ಯಾಲರಿ ಸೌಲಭ್ಯಗಳೊಂದಿಗಿನ ವಾಲಿಬಾಲ್ , ಬಾಸ್ಕೆಟ್ ಬಾಲ್ ಕೋರ್ಟ್, ನಾಲ್ಕು ಅಂತಸ್ತಿನ ಪವಿಲಿಯನ್ ಕಟ್ಟಡ, ಈಜು ಕೊಳ, 8 ಲೈನ್ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಸಹಿತ ಅತ್ಯಾಧುನಿಕ ಸೌಭ್ಯಗಳಿಂದ ಸ್ಟೇಡಿಯಂ ಸಿದ್ಧವಾಗುತ್ತಿದೆ. ನೀಲೇಶ್ವರ ಬ್ಲೋಕ್ ಪಂಚಾಯತ್ ಬಳಿಯ 7.1 ಎಕ್ರೆ ಜಾಗದಲ್ಲಿ ಈ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿದೆ. 5.17 ಕೋಟಿ ರೂ.ವೆಚ್ಚದಲ್ಲಿ ಫೆÇ್ಲೀರಿಂಗ್ ಕಾಮಗಾರಿ ನಡೆಸಲಾಗುವುದು. 9.61 ಕೋಟಿ ರೂ. ವೆಚ್ಚದಲ್ಲಿ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳು ನಡೆದುಬರುತ್ತಿವೆ. 2018 ಜೂನ್ ತಿಂಗಳಲ್ಲಿ ಆರಂಭಗೊಂಡ ನಿರ್ಮಾಣ ಕಾಮಗಾರಿ ಎರಡು ಹಂತಗಳಲ್ಲಿ ಜಾರಿಗೊಂಡಿದೆ. ಸ್ಟೇಡಿಯಂ ಪವಲಿಯನ್ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಕೋವಿಡ್ ಪ್ರತಿರೋಧ ಅಂಗವಾಗಿ ದೇಶಾದ್ಯಂತ ಜಾರಿಗೊಂಡ ಲಾಕ್ ಡೌನ್ ಆದೇಶ ಪರಿಣಾಮ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು.
ಕಿಟ್ ಕೋ ಸಂಸ್ಥೆ ನಿರ್ವಹಣೆ ಏಜೆನ್ಸಿ ಯಾಗಿದ್ದು, ಯೋಜನೆ ಸಿದ್ಧಪಡಿಸಿತ್ತು. ಕ್ರೀಡಾ-ಯುವಜನ ಕಲ್ಯಾಣ ಇಲಾಖೆ, ಜಿಲ್ಲಾ ಕ್ರೀಡಾ ಮಂಡಳಿ, ಸ್ಥಳೀಯಾಡಳಿತ ಸಂಸ್ಥೆ ಜಂಟಿ ನಿಯಂತ್ರಣದಲ್ಲಿ ಸ್ಟೇಡಿಯಂ ನ ಚಟುವಟಿಕೆಗಳು ನಡೆಯಲಿವೆ.

