ಕಾಸರಗೋಡು: ದಿನನಿತ್ಯದ ಗೃಹೋದ್ಯಮ ಅಗತ್ಯಗಳಿಗೆ ಪರಿಣತರ ಸೇವೆ ಇನ್ನು ಮುಂದೆ ಸ್ಕಿಲ್ ರೆಜಿಸ್ಟ್ರಿ ಮೊಬೈಲ್ ಅಪ್ಲಿಕೇಷನ್ ಮೂಲಕ ಲಭ್ಯವಾಗಲಿದೆ. ಕೇರಳ ಅಕಾಡೆಮಿ ಫಾರ್ ಸ್ಕಿಲ್ ಎಕ್ಸಲೆನ್ಸ್ ನೇತೃತ್ವದಲ್ಲಿ "ಸ್ಕಿಲ್ ರೆಜಿಸ್ಟ್ರಿ" ಆಪ್ ಸಿದ್ಧಪಡಿಸಲಾಗಿದೆ. ತಾಂತ್ರಿಕ, ಪರಂಪರಾಗತವಾಗಿರುವ ವಿವಿಧ ವಲಯಗಳಲ್ಲಿ ಪರಿಣತರಾದ ಮಂದಿಯ ಸೇವೆಗಳನ್ನು ಒದಗಿಸುವುದು ಇದರ ಲಕ್ಷ್ಯವಾಗಿದೆ. ನೌಕರಿ ಪರಿತರ ಸೇವೆ, ಪೆÇ್ರವೈಡರ್ ಗಳ ಸೇವೆ ಅಗತ್ಯವಿರುವ ಗ್ರಾಹಕರು ನೋಂದಣಿ ನಡೆಸಬಹುದು. ಕೋವಿಡ್ 19 ಕಾರಣ ಕೇರಳಕ್ಕೆ ಮರಳಿರುವ ಆನಿವಾಸಿ ಮಂದಿ, ಲಾಕ್ ಡೌನ್ ನಿಂದ ನಿರುದ್ಯೋಗ ಸಮಸ್ಯೆಗಳಿಂದ ಬಳಲುತ್ತಿರುವ ಮಂದಿ, ದಿನಂಪ್ರತಿಯ ಗೃಹೋದ್ಯಮ ನೌಕರರನ್ನು ಬಯಸುವ ಮಂದಿ ಸ್ಕಿಲ್ ರೆಜಿಸ್ಟ್ರಿ ಆಪ್ ಪ್ರಯೋಜನಕಾರಿಯಾಗಲಿದೆ.
ಹೇಗೆ ಪಡೆಯಬಹುದು?
ಗೂಗಲ್ ಪ್ಲೇ ಸ್ಟೋರ್ ನಿಂದ ಆಪ್ ಡೌನ್ ಲೋಡ್ ನಡೆಸಿ ಬಳಸಬಹುದಾಗಿದೆ. ಮಾಹಿತಿಗೆ ಕಾಸರಗೋಡು ಸರ್ಕಾರಿ ಐ.ಟಿ.ಐ (ದೂರವಾಣಿ ಸಂಖ್ಯೆ: 9447713239) ಯನ್ನು ಸಂಪರ್ಕಿಸಬಹುದು.


