ಕುಂಬಳೆ: ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಎಂ.ಎಸ್.ಮೊಗ್ರಾಲ್ ಸ್ಮಾರಕ ವಾಚನಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಲಾಕ್‍ಡೌನ್ ನಿಬಂಧನೆಗಳನ್ನು ಪಾಲಿಸಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯ ಹುಸೈನ್ ಮಾಸ್ತರ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಜಯನ್ ಮಾಸ್ತರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಎಂ.ಎಸ್.ಮೊಗ್ರಾಲ್ ಸ್ಮಾರಕ ವಾಚನಾಲಯ ಅಧ್ಯಕ್ಷ ಸಿದ್ದಿಕ್ ರಹಮಾನ್ ಅಧ್ಯಕ್ಷತೆ ವಹಿಸಿದರು. ಸಿದ್ದಿಕ್ ಆಲಿ ಮೊಗ್ರಾಲ್, ಎಂ.ಸಿ.ಎಂ.ಅಕ್ಬರ್, ನಿಸಾರ್ ಪೆರುವಾಡು, ಹಸೀಬ್ ಮೊಗ್ರಾಲ್ ಮೊದಲಾದವರು ಮಾತನಾಡಿದರು. ವಾಚನಾಲಯ ಕಾರ್ಯದರ್ಶಿ ನೂಹ್ಮಾನ್ ಮಾಸ್ತರ್ ಸ್ವಾಗತಿಸಿ, ಹನೀಫ್ ಮುಹಮ್ಮದ್ ವಂದಿಸಿದರು.


