ಕಾಸರಗೋಡು: ಪಂಜಾಬ್ ನ್ಯಾಶನಲ್ ಬ್ಯಾಂಕ್‍ನ ಎಟಿಎಂನಲ್ಲಿ ಬುಧವಾರ ಬೆಳಗ್ಗೆ ಸುಮಾರು 7.45ರ ವೇಳೆಗೆ ಅಗ್ನಿ ಅನಾಹುತ ಉಂಟಾಗಿದೆ.
ಕಾಸರಗೋಡು ಕರಂದಕ್ಕಾಡಿನ ಅಶ್ವಿನಿ ನಗರದಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್‍ನ ಎಟಿಎಂನಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ.
ವಿಷಯ ತಿಳಿದು ಕಾಸರಗೋಡಿನ ಅಗ್ನಿ ಶಾಮಕದಳವು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು. ಬೆಂಕಿ ಅನಾಹುತದಿಂದಾಗಿ ಎಟಿಎಂನ ಯಂತ್ರಕ್ಕೆ ಆಂಶಿಕ ಹಾನಿಯುಂಟಾಗಿದೆ. ಇದರಲ್ಲಿ ಯಾವುದೇ ಭಾರೀ ದೊಡ್ಡ ನಾಶನಷ್ಟ ಉಂಟಾಗಲಿಲ್ಲ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


