ಪೆರ್ಲ: ಪ್ರಸಿದ್ದ ಪಾಕತಜ್ಞ ಬೇಂಗಪದವು ಸಮೀಪದ ಪೆಲ್ತಾಜೆ ಗೋಪಾಲಕೃಷ್ಣ ಭಟ್(78) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಹಲವಾರು ಬ್ರಹ್ಮಕಲಶ, ವಾರ್ಷಿಕೋತ್ಸವಗಳ ಅಡುಗೆ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರಿಗೆ ರುಚಿಕಟ್ಟಾದ ಅಡುಗೆಮಾಡಿ ಉಣಬಡಿಸುವುದರಲ್ಲಿ ಎತ್ತಿದಕೈಯಾಗಿ ಜನಾನುರಾಗಿಯಾಗಿದ್ದರು. ಇವರ ಸಿಹಿ ತಿಂಡಿಯ ವಿಶೇಷ ರುಚಿಯ ಕಾರಣ ಜನಪ್ರಿಯತೆಗಳಿಸುವಲ್ಲಿ ಸಫಲರಾಗಿ ಹೋಳಿಗೆ ಗೋಪಣ್ಣ ರೆಂದೇ ಖ್ಯಾತಿಪಡೆದಿದ್ದರು. ಮಂಗಳೂರಿನ ಹೆಸರಾಂತ ತಿಂಡಿಗಳ ಸಂಸ್ಥೆ ನರನ್ಸ್ ಮಂಗಳೂರು ಇದರಲ್ಲಿ ಸಿಹಿತಿಂಡಿ ವಿಭಾಗ, ಕ್ಯಾಟರಿಂಗ್ ವಿಭಾಗ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


