ಕಾಸರಗೋಡು: ಸೆರೆನೆವಾಸಿಗಳು ನಿರ್ಮಿಸಿರುವ ವಿದ್ಯುತ್ ಬಲ್ಬುಗಳು ವೃದ್ಧಾಶ್ರಮವನ್ನು ಬೆಳಗಲಿವೆ. ಹೊಸದುರ್ಗ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವವರು ನಿರ್ಮಿಸಿರುವ ಎಲ್.ಇ.ಡಿ. ಬಲ್ಬುಗಳು ಈ ರೀತಿ ವೃದ್ಧಾಶ್ರಮದಲ್ಲಿ ಬಳಕೆಯಾಗಲಿವೆ. ಖೈದಿಗಳ ಸ್ವ ಉದ್ಯೋಗ ತರಬೇತಿ ಅಂಗವಾಗಿ ಮನ್ಸೂರ್ ಆಸ್ಪತ್ರೆಯ ಸಹಕಾರದೊಂದಿಗೆ ಬಲ್ಬು ನಿರ್ಮಾಣ ಆರಂಭಿಸಲಾಗಿತ್ತು. 35 ಮಂದಿಗೆ ಈ ನಿಟ್ಟಿನಲ್ಲಿ ತರಬೇತಿ ಒದಗಿಸಲಾಗಿದೆ. ಈ ಮೂಲಕ ಇವರು ನಿರ್ಮಿಸಿರುವ ಒಂದು ಡಝನ್ ಬಲ್ಬುಗಳನ್ನು ಪ್ರೀತಿಯ ಕೊಡುಗೆಯ ರೂಪದಲ್ಲಿ ಕಾಸರಗೋಡು ವೃದ್ಧಾಶ್ರಮಕ್ಕೆ ನೀಡಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ವೃದ್ದಾಶ್ರಮದ ಮೇಟ್ರನ್ ಆಸ್ವಾ ಅವರಿಗೆ ಬಲ್ಬುಗಳನ್ನು ಹಸ್ತಾಂತರಿಸಲಾಗಿದೆ.
ಜೈಲ್ ವರಿಷ್ಠಾಧಿಕಾರಿ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಮನ್ಸೂರ್ ಆಸ್ಪತ್ರೆ ಅಧ್ಯಕ್ಷ ಕುಂಞಹಮ್ಮದ್ ಪಾಲಕ್ಕಿ, ಸಹಾಯಕ ವರಿಷ್ಠಾಧಿಕಾರಿಗಳಾದ ಪಿ.ಗೋಪಾಲಕೃಷ್ಣನ್, ಕೆ.ರಾಜೀವನ್, ಡೆಪ್ಯೂಟಿ ಪ್ರಿಸನ್ ಆಫೀಸರ್ ಕೆ.ವಿ.ಸಂತೋಷ್, ವಿನೀತ್ ಸಿ. ಉಪಸ್ಥಿತರಿದ್ದರು. ಬಲ್ಬು ಗಳಲ್ಲದೆ ಇವರು ಸಿದ್ಧಪಡಿಸಿರುವ ವಿವಿಧ ರೀತಿಯ ಕೊಡುಗೆಗಗಳೂ ಮಾರಾಟಕ್ಕೆ ಸಿದ್ಧವಿವೆ.





