ಕಾಸರಗೋಡು: ಉದ್ಯೋಗ ವಿನಿಮಯ ಕೇಂದ್ರದ ಸೇವೆಗಳಿಗೆ ನೂತನ ಸೌಲಭ್ಯ ಏರ್ಪಡಿಸಲಾಗಿದೆ. ಕೋವಿಡ್ ಸೋಂಕು ಹರಡುವಿಕೆ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜುಲೈ-ಆಗಸ್ಟ್ ತಿಂಗಳ ಉದ್ಯೋಗಾರ್ಥಿಗಳ ನಿಭಿಡತೆ ನಿಯಂತ್ರಿಸುವ ನಿಟ್ಟಿನಲ್ಲಿ ನೋಂದಣಿ, ನವೀಕರಣ, ಅರ್ಹತಾಪ್ರಗಳ ಸೇರ್ಪಡೆ ಸಹಿತ ಸೇವೆಗಳು 2020 ಸೆ.30 ವರೆಗೆ www.eemployment.kerala.gov.in ಮೂಲಕ ಮಾತ್ರ ಲಭ್ಯ. "ಶರಣ್ಯ","ಕೈವಲ್ಯ" ಸಹಿತ ಸ್ವೋದ್ಯೋಗ ಯೋಜನೆಗಳ ಸಾಲ ಮರುಪಾವತಿ, ಉದ್ಯೋಗ ವಿನಿಮಯ ಕೇಂದ್ರ ಮೂಲಕ ತಾತ್ಕಾಲಿಕ ನೇಮಕಾತಿ ಪಡೆದವರ ಬಿಡುಗಡೆ ಪತ್ರದ ಸೇರ್ಪಡೆ ಇತ್ಯಾದಿ ಸೇವೆಗಳು ನೇರವಾಗಿ ಲಭ್ಯವಿವೆ.
ನೂತನ ನೋಂದಣಿ, ಅರ್ಹತಾಪತ್ರ ಸೇರ್ಪಡೆ, ಉದ್ಯೋಗ ಪರಿಚಯ ಪತ್ರ ಸೇರ್ಪಡೆ ಇತ್ಯಾದಿwww.eemployment.kerala.gov.in ಮೂಲಕ ಲಭ್ಯ. ಅಸಲಿ ಸರ್ಟಿಫಿಕೆಟ್ ಗಳನ್ನು 2020 ಅಕ್ಟೋಬರ್ ತಿಂಗಳಿಂದ 2020 ಡಿ.31 ವರೆಗೆ ಆಯಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಪಾಸಣೆಗಾಗಿ ಹಾಜರುಪಡಿಸಿದರೆ ಸಾಕು. 2019 ಡಿ.20 ರ ನಂತರ ನೌಕರಿಯಿಂದ ನಿಯಮಬದ್ಧವಾಗಿ ಬಿಡುಗಡೆಹೊಂದಿದವರಲ್ಲಿ, ಡಿಸ್ಚಾರ್ಜ್ ಸರ್ಟಿಫೀಕೆಟ್ ಹಾಜರುಪಡಿಸುವ ಉದ್ಯೋಗಾರ್ಥಿಗಳಿಗೆ 2020 ಡಿ.31 ವರೆಗೆ ಸೀನಿಯಾರಿಟಿ ಉಳಿಸಿಕೊಂಡು ಬಿಡುಗಡೆ ಪತ್ರ ಸೇರಿಸಿ ನೀಡಲಾಗುವುದು. 2020 ಜನವರಿಯಿಂದ 2020 ಸೆಪ್ಟೆಂಬರ್ ವರೆಗೆ ನೋಂದಣಿ ನವೀಕರಣ ನಡೆಸುವವರಿಗೆ 2020 ಡಿ.31 ವರೆಗೆ ನವೀಕರಣಕ್ಕೆ ಅನುಮತಿ ನೀಡಲಾಗುವುದು. ಮಾರ್ಚ್ ಯಾ ಅದರ ನಂತರ ನೋಂದಣಿ ನಡೆಸಬಯಸುವ ಪರಿಶಿಷ್ಟ ಜಾತಿ/ಪಂಗಡ ಜನಾಂಗಗಳ ಉದ್ಯೋಗಾರ್ಥಿಗಳಿಗೆ ಈ ಸೌಲಭ್ಯ ಡಿ.31 ವರೆಗೆ ಲಭ್ಯವಿರುವುದು. ಉದ್ಯೋಗಾರ್ಥಿಗಳು ಫೆÇೀನ್/ಇ-ಮೇಲ್ ಮುಖಾಂತರ ಆಯಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಿ ನೋಂದಣಿ ನವೀಕರಣ ನಡೆಸಬಹುದು. ಆನ್ ಲೈನ್ ಸೇವೆ ಸಂಬಂಧ ಸಲಹೆ-ಸೂಚನೆ-ಸಶೈ ನಿವಾರಣೆಗಾಗಿ ಉದ್ಯೋಗ ವಿನಿಮಯ ಕೇಂದ್ರದ ದೂರವಾಣಿ ಸಂಖ್ಯೆಗಳು: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ-04994-255582, ಹೊಸದುರ್ಗ ಟೌನ್ ಉದ್ಯೋಗ ವಿನಿಮಯ ಕೇಂದ್ರ-0467-22209068.