ಕಾಸರಗೋಡು: ಕೃಷಿ ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವದಿ ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ 27.29 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ ಕೃಷಿ ಸಾಲ ಪಡೆದಿದ್ದ 99 ಮಂದಿ ಫಲಾನುಭವಿಗಳಿಗೆ ಈ ಮೊಬಲಗು ಸಾಲ ಮರುಪಾವತಿಗೆ ಕಾಲಾವಧಿ ಒದಗಿಸುವ ನಿಟ್ಟಿನಲ್ಲಿ ಮಂಜೂರಾಗಿದೆ. ಈ ಸೌಲಭ್ಯ ಲಭಿಸಿದವರ ತಮ್ಮ ಹೆಸರು, ವಿಳಾಸ, ನೋಟೀಸ್ ಸಂಬಂಧ ಸಹಕಾರಿ ಬ್ಯಾಂಕ್ ಗಳ ಮಂಡಳಿ ತಮ್ಮ ನೋಟೀಸು ಬೋರ್ಡ್ ನಲ್ಲಿ ಪ್ರಕಟಿಸಿದ್ದಾರೆ ಎಂದು ಸಹಕಾರಿ ಸಂಘ ಜಂಟಿ ರೆಜಿಸ್ತ್ರಾರ್ (ಜನರಲ್) ತಿಳಿಸಿರುವರು.





