ಮಂಜೇಶ್ವರ: ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ನೀತಿ ಪಾಲಿಸಬೇಕು, ಕೃಷಿ ಕಾರ್ಮಿಕ ವಿರೋಧಿ ಧೋರಣೆಗಳನ್ನು ಕೈ ಬಿಡಬೇಕು, ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬಾರದು, ಇಂಧನ ಬೆಲೆಯೇರಿಕೆ ತಡೆಯಬೇಕು ಉದ್ಯೋಗ ಮತ್ತು ವೇತನ ಸಂರಕ್ಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಎದುರಾಗಿ ಚಿಗುರುಪಾದೆ ಅಂಚೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಮಲಾಕ್ಷ. ಡಿ ಅವರ ಅಧ್ಯಕ್ಷತೆಯಲ್ಲಿ ಎಐಟಿಯುಸಿ ನೇತಾರರಾದ ಗಂಗಾಧರ ಕೊಡ್ದೆ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ನೇತಾರರಾದ ಲೋಕೇಶ ಸಿ ಸ್ವಾಗತಿಸಿ,ಕಿಶೋರ್ ವಂದಿಸಿದರು.
ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಮಲಾಕ್ಷ. ಡಿ ಅವರ ಅಧ್ಯಕ್ಷತೆಯಲ್ಲಿ ಎಐಟಿಯುಸಿ ನೇತಾರರಾದ ಗಂಗಾಧರ ಕೊಡ್ದೆ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ನೇತಾರರಾದ ಲೋಕೇಶ ಸಿ ಸ್ವಾಗತಿಸಿ,ಕಿಶೋರ್ ವಂದಿಸಿದರು.