ಮುಳ್ಳೇರಿಯ: ಕೇರಳ ವಿದ್ಯಾಭ್ಯಾಸ ಇಲಾಖೆಯು 2019-20 ನೇ ಸಾಲಿನಲ್ಲಿ ನಡೆಸಿದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ. ವೈಷ್ಣವಿ.ಜೆ, ರಕ್ಷಿತಾ ಯಂ.ಆರ್, ವರ್ಷಾ ಎ.ಬಿ, ಶ್ರೀಜನ್ ಎ.ಬಿ, ಅಭಿಲಾಷ್.ಕೆ ಹಾಗೂ ಫಾತಿಮತುಲ್ ಮುಬಷಿರಾ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯನ್ನು ಪಡೆದಿದ್ದಾರೆ ಹಾಗೂ ಪ್ರಜ್ಞಾ.ಪಿ, ಸೌಂದರ್ಯ. ಎ, ಫಾತಿಮತ್ ಸಫ್ರೀನಾ, ಮರಿಯಮ್ಮ್ ಜಿನಾನಾ ಅಫ್ನಾಸ್ 9 ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದ, ರಕ್ಷಕ ಶಿಕ್ಷಕ ಸಮಿತಿ ಅಭಿನಂದಿಸಿದೆ.






