ತಿರುವನಂತಪುರ: ಕೋವಿಡ್ ಸಾಮಾಜಿಕ ಹರಡುವಿಕೆಯ ಅತಿ ಸಮೀಪದ ಹಂತದಲ್ಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನಿನ್ನೆ ಸಂಜೆಯ ದೈನಂದಿನ ಕೋವಿಡ್ ಪರಿಶೀಲನಾ ಸಭೆಯ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸೂಪರ್ ಸ್ಪ್ರೆಡ್ ಸಾಮಾಜಿಕ ವಿಸ್ತರಣೆಯ ಪೂರ್ವಸೂಚಕವಾಗಿದೆ ಎಂದು ಅವರು ಹೇಳಿದರು.
ಕೋವಿಡ್ ನ ಸೂಪರ್ ಹರಡುವಿಕೆಯು ಸಾಮುದಾಯಿಕ ಹರಡುವಿಕೆ(ಕಮ್ಯುನಿಟಿ ಸ್ಪ್ರೆಡ್)ಯ ಮುಂಚಿನ ಸ್ಥಿತಿಯಾಗಿದೆ. ಈಗಿನ ಸ್ಥಿತಿಗತಿಗಳು ಅದನ್ನೇ ಸೂಚಿಸುತ್ತಿದೆ. ಆದರೆ ಹಾಗಾಗದಂತೆ ತೀವವರ ಕಟ್ಟೆಚ್ಚರ ಬೇಕಿದೆ ಎಂದು ಸಿಎಂ ಹೇಳಿದರು.
ಸಾಮಾಜಿಕ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ರಾಜ್ಯದ ಸಂರಕ್ಷಣೆಯನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಮತ್ತು ವಿಶೇಷ ಪರಿಸ್ಥಿತಿಯಲ್ಲಿ ಒಗ್ಗಟ್ಟಾಗಿ ಇದನ್ನು ತಡೆಯಲು ಕೈಲಾದ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು. ಲಾಕ್ ಡೌನ್ ಭಾನುವಾರ ಹಿಂತೆಗೆಲ್ಪಟ್ಟಿವೆಯಾದರೂ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮುಂದುವರಿಯಲಿದೆ ಎಂದರು.
ಮೀನು ಮಾರುಕಟ್ಟೆಗೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ರೋಗ ಹರಡುವಿಕೆಗೆ ಕಾರಣವಾಗಿದೆ ಎಂದು ಸಿಎಂ ಹೇಳಿದರು. ಈ ಹಿನ್ನೆಲೆಯಲ್ಲಿ ಕೆಲವು ಮಾರುಕಟ್ಟೆಗಳನ್ನು ಮುಚ್ಚಬೇಕಾಗಿದೆ. ತಿರುವನಂತಪುರಂನಲ್ಲಿ ಹೇರಲಾಗಿರುವ ಟ್ರಿಪಲ್ ಲಾಕ್ ಡೌನ್ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಹೀಗಾದಲ್ಲಿ ಬಹುದೊಡ್ಡ ಸಂಕಷ್ಟ ಇನ್ನೊಂದು ರೂಪದಲ್ಲಿ ಎದುರಾಗಲಿದೆ ಎಂದು ಎಚ್ಚರಿಸಿದರು. ಟ್ರಿಪಲ್ ಲಾಕ್-ಡೌನ್ ಅಗತ್ಯವಿರುವ ಹಂತದಲ್ಲಿ ಕಠಿಣಗೊಳಿಸಲಾಗುವುದು ಮತ್ತು ಕೆಲವು ಹಂತದಲ್ಲಿ ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.


