ಕಾಸರಗೋಡು: ವಿದೇಶದಿಂದ ಆಗಮಿಸಿ ಮನೆಯಲ್ಲಿ ನಿಗಾದಲ್ಲಿ ಕಳೆಯುತ್ತಿದ್ದ ವ್ಯಕ್ತಿಯೊಂದಿಗೆ ಮೋಜಿನಲ್ಲಿ ತೊಡಗಿದ್ದ ಮೂವರನ್ನು ಹಾಗೂ ಇವರಿಗೆ ಅವಕಾಶ ಒದಗಿಸಿಕೊಟ್ಟ ನಿಗಾದಲ್ಲಿದ್ದ ವ್ಯಕ್ತಿಯನ್ನು ಸರ್ಕಾರಿ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ಬೇಡಡ್ಕದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಕಾಞÂರಡ್ಕದ ನಿವಾಸಿ, 33ರ ಹರೆಯದ ವ್ಯಕ್ತಿ ಜೂನ್ 26ರಂದು ಬಹರೈನ್‍ನಿಂದ ಆಗಮಿಸಿದ್ದು, ಈತನನ್ನು ಮನೆಯಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಜುಲೈ 3ರಂದು ಈತನ ಮನೆಗೆ ಈತನ ಸ್ನೇಹಿತರಾದ ಮೂವರು ಆಗಮಿಸಿ ಮೋಜಿನಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ ನಾಲ್ಕೂ ಮಂದಿಯನ್ನು ಬದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿನ ಸರ್ಕಾರಿ ಕ್ವಾರಂಟೈನ್‍ಗೆ ಕಳುಹಿಸಿಕೊಡಲಾಗಿದೆ.





