ಕಾಸರಗೋಡು: ಕೂಡ್ಲು ಸಮೀಪದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಮಹಾ ಸಭೆ ಶ್ರೀ ಕ್ಷೇತ್ರದಲ್ಲಿ ಅನುವಂಶಿಕ ಮೊಕ್ತೇಸರರಾದ ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯದರ್ಶಿ ಸುರೇಶ್ ಮಣಿಯಾಣಿ ವರದಿಯನ್ನೂ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಲೆಕ್ಕಪತ್ರವನ್ನು ಮಂಡಿಸಿದರು. ಸಭೆ ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಮಾರಂಭದಲ್ಲಿ ಶೇಷವನ ಕ್ಷೇತ್ರದ ನಿರ್ಮಾಣ ಕಾಲಘಟ್ಟದಿಂದ ಇತ್ತೀಚೆಗಿನ ದಿನದವರೆಗೆ ಭಜನಾ ಸೇವೆಯ ನೇತೃತ್ವ್ವವನ್ನು ಬಹಳ ಶ್ರದ್ಧೆ ನಿಷ್ಠೆಯಿಂದ ಮಾಡಿದ ಹಿರಿಯ ಭಜನಾಕಾರ ಜಯ ಬಲ್ಯಾಯ ಕೂಡ್ಲು ಅವರನ್ನು ಸ್ಮರಣಿಕೆ, ಫಲ ಪುಷ್ಪ ತಾಂಬೂಲಾದಿಗಳನ್ನು ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ನೂತನ ಟ್ರಸ್ಟ್ ಬೋರ್ಡನ್ನು ನೇಮಿಸಲಾಯಿತು. ಆಡಳಿತ ಮೊಕ್ತೇಸರರಾಗಿ ಕಿರಣ್ ಪ್ರಸಾದ್ ಕೂಡ್ಲು , ಕಾರ್ಯದರ್ಶಿಯಾಗಿ ವಸಂತ ನಾಂಗುರಿ, ಕೋಶಾ„ಕಾರಿಯಾಗಿ ಸುರೇಶ್ ನಾಯ್ಕ್, ಸದಸ್ಯರಾಗಿ, ಶಶೀಂದ್ರನ್, ಗೋಪಾಲಕೃಷ್ಣ ಪಾಂಚಜನ್ಯ, ಶರತ್ ನಾಯ್ಕ್, ಸುರೇಶ್ ಅಭಿನಂದನ್, ಸುನಂದ ಅವರು ಆಯ್ಕೆಯಾದರು. ನೂತನವಾಗಿ ಅಯ್ಕೆಯಾದ ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು ಅವರು ಮಾತನಾಡಿ ಕ್ಷೇತ್ರದ ದೈನಂದಿನ ಪೂಜಾ„ಗಳು ಸುಸೂತ್ರವಾಗಿ ನಡೆಯುವುದಕ್ಕಾಗಿ ಎಲ್ಲಾ ಸದಸ್ಯರು ಹಾಗು ಭಕ್ತಾದಿಗಳು ಶಾಶ್ವತ ಪೂಜಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡರು. ಬಾಲಸುಬ್ರಹ್ಮಣ್ಯ, ಸುರೇಶ್ ನಾಯ್ಕ್, ಶಶೀಂದ್ರನ್, ಗೋಪಾಲಕೃಷ್ಣ ಬಲ್ಯಾಯ, ವೇಣುಗೋಪಾಲ ಬಾಮ, ಉದಯಕುಮಾರ ಕುಮಾರಧಾರ ಮುಂತಾದವರು ಮಾತನಾಡಿದರು. ಸುರೇಶ್ ಮಣಿಯಾಣಿ ಸ್ವಾಗತಿಸಿದರು. ವಸಂತ ನಾಂಗುರಿ ವಂದಿಸಿದರು.




