ತಿರುವನಂತಪುರ: ರಾಜ್ಯ ಸರ್ಕಾರದ ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ(ಕೆ.ಎ.ಎಸ್.ಪಿ) ಅನ್ವಯ ಕಾರ್ಯವೆಸಗುವ ಖಾಸಗೀ ಆಸ್ಪತ್ರೆಗಳಲ್ಲೂ ಸರ್ಕಾರದಿಂದ ಕೋವಿಡ್ ಚಿಕಿತ್ಸೆಗೆ ಸೂಚಿಸಲ್ಪಡುವ ಖಾಸಗೀ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಾನದಂಡಗಳೊಂದಿಗೆ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತಂದಿದೆ.
ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯ ಅನುಷ್ಠಾನಕ್ಕಾಗಿ ರೂಪಿಸಲಾದ ಹೆಲ್ತ್ ಏಜೆನ್ಸಿ (ಎಸ್.ಎಚ್.ಎ) ಹೊರತಂದ ಮಾರ್ಗಸೂಚಿ ಅನುಸಾರ ದಾಖಲಾತಿ ಚಿಕಿತ್ಸೆಗೆ(ಎಡ್ಮಿಟ್) ಸೌಕರ್ಯಗಳಿರುವ ಖಾಸಗೀ ಆಸ್ಪತ್ರೆಗಳನ್ನು ಯೋಜನೆಯ ಸದಸ್ಯರಾಗಿಸಿ ಎಲ್ಲಾ ಆಸ್ದಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಏಕೀಕೃತ ವ್ಯವಸ್ಥೆಯಡಿ ಚಿಕಿತ್ಸೆಗೆ ವ್ಯವಸ್ಥೆ ರೂಪಿಸಲಾಗುವುದು.
ಸರ್ಕಾರದಿಂದ ಅನುಮೋದಿಸಲ್ಪಟ್ಟ ಆಸ್ಪತ್ರೆಗಳು, ಲ್ಯಾಬ್ ಗಳ ಮೂಲಕ ಜನಸಾಮಾನ್ಯರಿಗೆ ಕೋವಿಡ್ ನ ವಿವಿಧ ಸಹಾಯಗಳು, ಚಿಕಿತ್ಸೆಗಳು ಲಭ್ಯವಾಗುವುದು.
ಈ ಮಹತ್ವದ ತೀರ್ಮಾನದಂತೆ ಖಾಸಗೀ ಆಸ್ಪತ್ರೆಗಳಲ್ಲಿ ಜನರಲ್ ವಾರ್ಡ್‍ಗೆ 2300 ರೂ., ಎಚ್.ಡಿ.ಯು. 3300 ರೂ., ಹವಾನಿಯಂತ್ರಿತ ಕೊಠಡಿ 6500 ರೂ., ಹವಾನಿಯಂತ್ರಿತ ಹಾಗೂ ವೆಂಟಿಲೇಟರ್ ಸೌಲಭ್ಯಕ್ಕೆ 11,500 ರೂ., ಎಂಬ ಮಾನದಂಡಗಳಲ್ಲಿ ಒಂದು ದಿನದ ದರ ನಿಗದಿಪಡಿಸಲಾಗಿದೆ.
ಇದರ ಹೊರತಾಗಿ ಪಿ.ಪಿ.ಇ ಕಿಟ್ ಗಳಿಗಿರುವ ದರವನ್ನು ಪಾವತಿಸಬೇಕಾಗುತ್ತದೆ. ಆರ್.ಟಿ.ಪಿ.ಸಿ.ಆರ್. ಓಫನ್-2750 ರೂ., ಆಂಟಿಜನ್ ಟೆಸ್ಟ್ ಗೆ 625 ರೂ., ಎಕ್ಸ್ ಫಟ್ರ್ಸ್ ನೋಟ್ 3000 ರೂ., ಟ್ರೂ ನಾಟ್(ಸೆಟ್ಟಪ್-1)1500 ರೂ., ಟ್ರೂನಾಟ್ (ಸೆಟ್ಟಪ್-2) 1500 ರೂ. ದರ ನಿಗದಿಪಡಿಸಲಾಗಿದೆ.
ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯ ಸದಸ್ಯರಾದವರಿಗೆ ಕೋವಿಡ್ ಚಿಕಿತ್ಸೆಯ ಖರ್ಚುನ್ನು ಸಂಪೂರ್ಣವಾಗಿ ರಾಜ್ಯ ಆರೋಗ್ಯ ಇಲಾಖಾ ಏಜೆನ್ಸಿಯೂ, ಸುರಕ್ಷಾ ಯೋಜನೆಯಲ್ಲಿರದ ಸರ್ಕಾರ ಸೂಚಿಸುವ ಕೋವಿಡ್ ರೋಗಿಗಳ ಚಿಕಿತ್ಸಾ ಖರ್ಚನ್ನು ರಾಜ್ಯ ಸರ್ಕಾರ ವಹಿಸಲಿದೆ.


