ಕೊಚ್ಚಿ: ಕೊಚ್ಚಿಯಿಂದ ಮಂಗಳೂರಿಗೆ ಭೂಗರ್ಭ ಮೂಲಕ ಗ್ಯಾಸ್ ತಲುಪಿಸಲು ನಡೆಯುತ್ತಿರುವ ಪೈಪು ಅಳವಡಿಕೆ ಯೋಜನೆಯಾದ ಗೈಲ್ ಅಂತಿಮ ಹಂತದಲ್ಲಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಎರಡು ವಾರದೊಳಗೆ ಎಲ್ಲಾ ಭದ್ರತಾ ತಪಾಸಣೆ ನಡೆಸಿ ಪೈಪು ಮೂಲಕ ಗ್ಯಾಸ್ ತಲುಪಿಸಲು ಸಾಧ್ಯವಿದೆ. ಕೊಚ್ಚಿ-ಮಂಗಳೂರು ಮಧ್ಯೆ ಚಂದ್ರಗಿರಿ ಹೊಳೆಗೆ ಅಡ್ಡವಾಗಿ ಪೈಪು ಸ್ಥಾಪಿಸಲು ಅಗತ್ಯವುಳ್ಳ ಕೆಲಸಗಳು ಬಾಕಿಯಿತ್ತು. ಪೈಪು ಅಳವಡಿಸಲು ಬೇಕಾದ ರೀತಿಯಲ್ಲಿ ಮಣ್ಣಿನಡಿಯಲ್ಲಿ 1500 ಮೀಟರ್ ಕೊರೆಯಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ತಿಗೊಳಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


