ತಿರುವನಂತಪುರ: ಕೋವಿಡ್ ರೋಗ ಪ್ರತಿರೋಧ ಕಾರ್ಯಾಚರಣೆಯಲ್ಲಿ ಮೊದಲ ಸಾಲಿನಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಪೆÇಲೀಸರಿಗೂ ಕೋವಿಡ್ ರೋಗ ತಗಲ ತೊಡಗಿರುವ ಹಿನ್ನೆಲೆಯಲ್ಲಿ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಗೃಹ ಖಾತೆ ತೀರ್ಮಾನಿಸಿದೆ.
ಇಂತಹ ಕ್ವಾರಂಟೈನ್ ಕೇಂದ್ರಗಳಲ್ಲಿ ಆಹಾರ ಸೇರಿದಂತೆ ಅಗತ್ಯದ ಸೌಕರ್ಯಗಳನ್ನು ಏರ್ಪಡಿಸಲಾಗುವುದು. ಕೋವಿಡ್ ರೋಗಿಗಳೊಂದಿಗೆ ತಿಳಿಯದೆ ಸಂಪರ್ಕ ಹೊಂದುವ ಪೆÇಲೀಸರನ್ನು ಇಂತಹ ಕ್ವಾರಂಟೈನ್ ಕೇಂದ್ರಗಳಲ್ಲಿ ನಿಗಾದಲ್ಲಿರಿಸಲಾಗುವುದು.
ಅದಕ್ಕೆ ಹೊಂದಿಕೊಂಡು ಅಗತ್ಯದ ಕ್ವಾರಂಟೈನ್ ಕೇಂದ್ರಗಳನ್ನು ಸಜ್ಜೀಕರಿಸುವ ಹೊಣೆಗಾರಿಕೆ ಆಯಾ ಜಿಲ್ಲೆಗಳ ಜಿಲ್ಲಾ ವರಿಷ್ಠ ಪೆÇಲೀಸ್ ಅಧಿಕಾರಿಗಳಿಗೆ ವಹಿಸಿಕೊಡಲು ಇಲಾಖೆ ತೀರ್ಮಾನಿಸಿದೆ.


