ಪೆರ್ಲ: ಎಣ್ಮಕಜೆ ಪಂಚಾಯತಿ ಹದಿನಾರನೇ ವಾರ್ಡ್ ಬಜಕೂಡ್ಲು ಖಂಡಿಗೆಯಲ್ಲಿ ಬಿಜೆಪಿ ನೂತನ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್ ಭಟ್ ಕಾರ್ಯಾಲಯವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು ಅವರು ಮಾತನಾಡಿ ಈ ವಾರ್ಡಿನಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.
ಬಿಜೆಪಿ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಅಡ್ಕಸ್ಥಳ ಅವರು ಪಕ್ಷದ ಕಾರ್ಯಾಲಯಕ್ಕೆ ಉಚಿತವಾಗಿ ಕಟ್ಟಡವನ್ನು ಬಿಟ್ಟುಕೊಟ್ಟ ಉದಯ ಚೆಟ್ಟಿಯಾರ್ ಇವರನ್ನು ಅಭಿನಂದಿಸಿದರು. ಪಕ್ಷದ ಹಿರಿಯ ಕಾರ್ಯಕರ್ತ ಸದಾಶಿವ ಭಟ್ ಹರಿ ನಿಲಯ ಸ್ವಾಗತಿಸಿ, ಲಲಿತಾ ಕೇಶವ ನಾಯಕ್ ವಂದಿಸಿದರು ಜನಪ್ರತಿನಿಧಿಗಳಾದ ಪುಟ್ಟಪ್ಪ ಖಂಡಿಗೆ, ಸತೀಶ್ ಕುಲಾಲ್ ನಲ್ಕ, ಹಿರಿಯ ಕಾರ್ಯಕರ್ತರಾದ ಗೋಪಾಲಕೃಷ್ಣ ಭಟ್, ವಿನಯ ಖಂಡಿಗೆ, ಪುರುಷೋತ್ತಮ ನಾಯಕ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


