ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ ಟೇಕ್ ಹೋಂ ರೇಷನ್ ಜನತೆಗೆ ಅನುಗ್ರಹಕಾರಕವಾಗಿದೆ.
ಲಾಕ್ ಡೌನ್ ನಂಥಾ ಬಿಗಿ ಪರಿಸ್ಥಿತಿಯಲ್ಲೂ ಮಹಿಳೆಯರಿಗೆ, ಶಿಶುಗಳಿಗೆ ಪೆÇೀಷಕಾಹಾರ ಒದಗಿಸುವ ವಿಚಾರದಲ್ಲಿ ರಾಜ್ಯಸರಕಾರ ತೋರುತ್ತಿರುವ ಕಾಳಜಿಯ ದ್ಯೋತಕವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ. ಲಾಕ್ ಡೌನ್ ಆದೇಶ ಜಾರಿಗೊಂಡ ಮೊದಲ ಹಂತದಲ್ಲೇ ಅಂಗನವಾಡಿಗಳ ಎಲ್ಲ ಮಕ್ಕಳ ಮನೆಗಳಿಗೆ ಟೇಕ್ ಹೋಂ ಪಡಿತರ ಸಾಮಾಗ್ರಿಗಳು ತಲಪಿವೆ. ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಟಿ.ಎಚ್.ಆರ್. ನ್ನು ಮಕ್ಕಳ ಮನೆಗಳಿಗೆ ಇವನ್ನು ತಲಪಿಸಿದ್ದಾರೆ. ನಂತರದ ಪ್ರತಿ ಹಂತಗಳಲ್ಲೂ ಟಿ.ಎಚ್.ಆರ್. ವಿತರಣೆ ಸಮಪರ್ಕವಾಗಿ ನಡೆದಿವೆ. ಜೂ.1ರಿಂದ 30 ವರೆಗೆ ಜಿಲ್ಲೆಯಲ್ಲಿ 3 ತಿಂಗಳಿಂದ 3 ವರ್ಷದ ನಡುವಿನ ವಯೋಮಾನದ 23001 ಮಕ್ಕಳಿಗೆ, 8124 ಮಹಿಳೆಯರಿಗೆ, 6432 ಹಾಲುಣಿಸುವ ತಾಯಂದಿರಿಗೆ, 496 ಯುವತಿಯರಿಗೆ ಟಿ.ಎಚ್.ಆರ್. ವಿತರಿಸಲಾಗಿದೆ.
6 ತಿಂಗಳಿಂದ 3 ವರ್ಷದ ನಡುವಿನ ವಯೋಮಾನದ ಮಕ್ಕಳಿಗೆ ಅಮೃತಂ ನ್ಯೂಟ್ರಿ ಮಿಕ್ಸ್, 3 ರಿಂದ 6 ವರ್ಷದ ಪ್ರೀ ಸ್ಕೂಲ್ ಮಕ್ಕಳಿಗೆ ಅಕ್ಕಿ, ಪಚ್ಚೆಹೆಸರು, ಸಜ್ಜಿಗೆ ರವೆ, ಪಾಯಸ ರವೆ, ಉದ್ದು, ಎಣ್ಣೆ, ನೆಲಗಡಲೆ, ಬೇಳೆ, ಸಕ್ಕರೆ ಇತ್ಯಾದಿಗಳನ್ನು ಅಳವಡಗೊಂಡಿರುವ ಕಿಟ್ , ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಸಕ್ಕಿಗೆ ರವೆ, ಪಾಯಸ ರವೆ, ಉದ್ದು, ಎಣ್ಣೆ, ಸಕ್ಕರೆ ಅಳವಡಗೊಂಡಿರುವ ಕಿಟ್ ವಿತರಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಯುವತಿಯರಿಗೆ ಟಿ.ಎಚ್.ಆರ್.ಕವರೇಜ್ ಹೆಚ್ಚಳಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಲು ಶಿಶು ಅಭಿವೃಧ್ಧಿ ಪ್ರಾಜೆಕ್ಟ್ ಅಧಿಕಾರಿಗಳಿಗೆ ಜಿಲ್ಲಾ ಐ.ಸಿ.ಡಿ.ಎಸ್. ಪೆÇ್ರೀಗ್ರಾಂ ಅಧಿಕಾರಿ ಆದೇಶ ನೀಡಿದ್ದರು.
ಯೋಜನೆ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿದೆ. ಜುಲೈ ತಿಂಗಳ ವಿತರಣೆ ಈಗಾಗಲೇ ಆರಂಭಗೊಂಡಿದೆ ಎಂದು ಐ.ಸಿ.ಡಿ.ಎಸ್. ಜಿಲ್ಲಾ ಪೆÇ್ರೀಗ್ರಾಂ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು.
3 ತಿಂಗಳಿಂದ 6 ವರ್ಷ ವರೆಗಿನ ವಯೋಮಾನದ ಮಕ್ಕಳಿಗೆ 180 ಎಂ.ಎಲ್.ಹಾಲು ವಿತರಿಸುವ ಯೋಜನೆ ಮಿಲ್ಮಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆದುಬರುತ್ತಿದೆ. ಪೆÇೀಷಕಾಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುವ ತೇನಮೃತ ನ್ಯೂಟ್ರೀ ಬಾರ್ ಮಿಠಾಯಿ ಕಾಸರಗೋಡು ಜಿಲ್ಲೆಯಲ್ಲಿ ವಿತರಿಸಲಾಗಿದೆ. ಉತ್ತಮ ಆರೋಗ್ಯದೊಂದಿಗೆ ನೂತನ ತಲೆಮಾರು ಬೆಳೆದುಬರುವುದು ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪೂರಕ ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯರ್ತರು ಕ್ರಿಯಾನಿರತರಾಗಿದ್ದಾರೆ.
ಚಿತ್ರ ಮಾಹಿತಿ: ವೆಸ್ಟ್ ಏಳೇರಿ ಗ್ರಾಮಪಂಚಾಯತ್ ನ ಮರ್ಣಾಡಂ ಅಂಗನವಾಡಿಗೆ ವಿತರಿಸಲಾದ ಟೇಕ್ ಹೋಂ ರೇಷನ್ ಸಾಮಾಗ್ರಿ.





