ಮಂಜೇಶ್ವರ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 40 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವ ಆಗಸ್ಟ್ 22 ರಂದು ಶನಿವಾರ ನಡೆಯಲಿದೆ.
ಕಾರ್ಯಕ್ರಮದಂಗವಾಗಿ ಶನಿವಾರ ಬೆಳಗ್ಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶ್ರೀ ಮಹಾ ಗಣಪತಿಯ ವಿಗ್ರಹ ರಚನೆಗೆ ಮುಹೂರ್ತ ನೆರವೇರಿತು. ಕ್ಷೇತ್ರದ ಪ್ರಧಾನ ಅರ್ಚಕ ತಿರುಮಲೇಶ ಆಚಾರ್ಯ ಹೊಸಂಗಡಿ ಇವರಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು. ಬಳಿಕ ವಿಗ್ರಹ ರಚನೆಗಾರ ಮಹೇಶ್ ಆಚಾರ್ಯ ಬಾಯಾರ್ ಇವರಿಂದ ವಿಗ್ರಹ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಿದರು. ಈ ವೇಳೆ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ. ನವೀನ್ ರಾಜ್ ಕೆ.ಜೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿ ಸುಧೀನ್ ವರ್ಕಾಡಿ, ಪ್ರಧಾನ ಸಂಚಾಲಕ ಪದ್ಮನಾಭ ಕಡಪ್ಪರ, ಜೊತೆ. ಕಾರ್ಯದರ್ಶಿಗಳಾದ ಚಂದ್ರಹಾಸ ಪೆಲಪ್ಪಾಡಿ, ಯಾದವ ಬಿ.ಎಂ, ಶಿವಪ್ರಸಾದ್ ಪೆಲಪ್ಪಾಡಿ, ದಯಾ ಪ್ರಸನ್ನ ಆಚಾರ್ಯ, ಭಾಸ್ಕರ ಬಿ.ಎಂ, ರಮೇಶ್ ಬಿ.ಎಂ, ನವೀನ್ ಕೌಡೂರು, ಚಿನ್ಮಯಾನಂದ ಆಚಾರ್ಯ ಕಾಳಿಕಾಂಬ, ಕೃಷ್ಣ ಜಿ. ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಈ ಬಾರಿಯ 40 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವ ಆಗಸ್ಟ್ 22 ರಂದು ಶನಿವಾರದಂದು ನಡೆಯಲಿದ್ದು, ಬೆಳಗ್ಗೆ ಗಣಪತಿ ಹೋಮ, ಶುಭ ಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬಳಿಕ ಪ್ರಾರ್ಥನೆ, ದೀಪ ಪ್ರತಿಷ್ಠೆ, ಧ್ವಜಾರೋಹಣ, ಶ್ರೀ ಮಹಾ ಗಣಯಾಗ, ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಪೂಜೆ, ಸಂಜೆ 4 ಕ್ಕೆ ಕಣ್ವತೀರ್ಥದ ಶ್ರೀ ರಾಮ ಸಮುದ್ರದಲ್ಲಿ ಶ್ರೀ ಮಹಾ ಗಣಪತಿಯ ವಿಗ್ರಹ ಜಲಸ್ಥ0ಭನೆ ನಡೆಯಲಿದೆ. ಮಂಜೇಶ್ವರದ ಇತಿಹಾಸದಲ್ಲಿ 4 ದಿನಗಳ ಪಯರ್ಂತ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ ಪ್ರಸಿದ್ದಿ ಪಡೆದ ಮಂಜೇಶ್ವರ ಶ್ರೀ ಗಣೇಶೋತ್ಸವ ಈ ಬಾರಿ ಒಂದೇ ದಿನ ವೈದಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳಿಗಣುಗುಣವಾಗಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯೊಂದಿಗೆ ಸಾಮಾಜಿಕ ಸ್ವಾಸ್ತ್ಯಕ್ಕೆ ಬದ್ಧವಾಗಿ ಈ ಬಾರಿ ಮಂಜೇಶ್ವರ ಶ್ರೀ ಗಣೇಶೋತ್ಸವ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ ತಿಳಿಸಿದ್ದಾರೆ.


