HEALTH TIPS

ಪಿಣರಾಯಿ ಪುತ್ರಿ ವೀಣಾ ಪಿಣರಾಯಿಯ ವಿವಾಹದ ಗುಂಪು ಪೋಟೋದಲ್ಲಿ ಸ್ವಪ್ನ- ನಕಲಿ ಚಿತ್ರದ ವಿರುದ್ದ ಎಎ ರಹೀಂ


            ಕೊಲ್ಲಂ:  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರ ವಿವಾಹಕ್ಕೆ ಸಂಬಂಧಿಸಿದ ನಕಲಿ ಚಿತ್ರ ಹರಡಿರುವುದರ ವಿರುದ್ಧ ಡಿವೈಎಫ್‍ಐ ಮುಖಂಡ ಎ.ಎ. ರಹೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾಹ ಪೋಟೋ ಆಲ್ಬಂ ನಲ್ಲಿ ಸ್ವರ್ಣಳ ಪೋಟೋವನ್ನು ಎಡಿಟ್ ಮಾಡಿ ಹಾಕಿರುವ ಬಗ್ಗೆ ಎ.ಎ.ರಹೀಂ ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
      ಡಿವೈಎಫ್‍ಐ ರಾಜ್ಯ ನೇತಾರನಾಗಿರುವ  ಎಎ ರಹೀಂ ಅವರು ಡಿವೈಎಫ್‍ಐ ಪೇಸ್ ಬುಕ್ ಪೇಜ್ ನಲ್ಲಿ ಬಂದಿರುವ ನಕಲಿ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ ನಕಲಿ ಚಿತ್ರ ನಿರ್ಮಿಸಿ ಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಸಚಿವ ಇ.ಪಿ.ಜಯರಾಜನ್ ಮತ್ತು ಅವರ ಕುಟುಂಬ ಒಳಗೊಂಡಿದ್ದ ಚಿತ್ರದಲ್ಲಿ ಜಯರಾಜನ್ ಅವರ ಪತ್ನಿಯ ಪೋಟೋ ಇರುವಲ್ಲಿ ಸ್ವಪ್ನಳ ಚಿತ್ರ ಮಾರ್ಫ್ ಮಾಡಲಾಗಿದೆ ಮತ್ತು ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ನಕಲಿ ಮುಖವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಕಾಂಗ್ರೆಸ್ಸ್ ನಾಯಕಿ ಬಿಂದು ಕೃಷ್ಣ ಅವರ ಮೇಲೆ ಕೊಲ್ಲಂನಲ್ಲಿ ಹಾಗೂ ಈ ಪೋಸ್ಟ್ ಮತ್ತಷ್ಟುಹರಡಿದ ಕಣ್ಣೂರು ಮೂಲದ ಯುವ ಕಾಂಗ್ರೆಸ್ಸ್ ರಾಜ್ಯ ನೇತಾರನ ಮೇಲೆ ಕಣ್ಣೂರಿನ ಡಿವೈಎಫ್‍ಐ ಸಮಿತಿ ಪೋಲೀಸರಿಗೆ ದೂರು ನೀಡಿದೆ ಎಂದು  ಎಎ ರಹೀಮ್ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
       ಸತ್ಯದ ಆಧಾರದ ಮೇಲೆ ಸೈದ್ಧಾಂತಿಕ ರಾಜಕೀಯ ರಕ್ಷಣೆಯನ್ನು ಮಾಡುವ ಬದಲು, ಮನೆಯಲ್ಲಿಯೇ ಇದ್ದುಕೊಂಡು ರಾಜಕೀಯ ಮೂರ್ಖತನ ಪ್ರದರ್ಶಿಸುತ್ತಿದ್ದಾರೆ. ಇಂತಹ ಹುಂಬ ರಾಜಕೀಯ ಚಟುವಟಿಕೆಯನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ.  ನಕಲಿ ಚಿತ್ರಗಳನ್ನು ನಿರ್ಮಿಸುವ ಈ ಅಭಿಯಾನವನ್ನು ಕಾಂಗ್ರೆಸ್ ರಾಜ್ಯ ಮಟ್ಟದಲ್ಲಿ ಯೋಜಿಸುತ್ತಿದೆ. ಈ ನಕಲಿ ಚಿತ್ರವನ್ನು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಿದ ಇತರರ ವಿರುದ್ಧ ದೂರು ನೀಡಲಾಗುವುದೆಂದು ಡಿವೈಎಫ್‍ಐ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries