ಕಾಸರಗೋಡು: ಜಿಲ್ಲಾ ನ್ಯಾಯಮೂರ್ತಿಯಾಗಿ ತಳಿಪ್ಪರಂಬಕ್ಕೆ ವರ್ಗಾವಣೆಗೊಂಡು ತೆರಳುತ್ತಿರುವ, ಡಿ.ಎಲ್.ಎಸ್.ಎ. ಪ್ರಭಾರ ಕಾರ್ಯದರ್ಶಿ ಮುಜೀಬ್ ರಹಮಾನ್ ಅವರಿಗೆ ಬೀಳ್ಕೊಡುಗೆ ನಡೆಯಿತು.
ಜಿಲ್ಲಾ ನ್ಯಾಯಾಲಯ ಸಮುಚ್ಛದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ನ್ಯಾಯಮೂರ್ತಿ ನಿರ್ಮಲಾ ಟಿ.ಕೆ. ಅವರು ಸ್ಮರಣಿಕೆ ಹಸ್ತಾಂತರಿಸಿದರು. ಕುಟುಂಬ ನ್ಯಾಯಾಲಯ ನ್ಯಾಯಮೂರ್ತಿ ಡಾ.ವಿಜಯಕುಮಾರ್, ಉಪ ನ್ಯಾಯಮೂರ್ತಿ ಸುಹೈಬ್ ಎಂ. ಉಪಸ್ಥಿತರಿದ್ದರು. ಕಾಸರಗೋಡು ಡಿ.ಎಲ್.ಎಸ್.ಎ. ಸದಸ್ಯ ದಿನೇಶ ಕೆ. ಸ್ವಾಗತಿಸಿದರು. ನೋಡೆಲ್ ಅಧಿಕಾರಿ ಕೇಶವನ್ ಎ. ವಂದಿಸಿದರು.





