ಕಾಸರಗೋಡು: ಆನ್‍ಲೈನ್ ಶಿಕ್ಷಣ ಪಡೆಯಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ವೆಳ್ಳಿಕೋತ್ ತಕ್ಷಶಿಲಾ ಕಾಲೇಜಿನ 2002-04 ನೇ ವರ್ಷದ ಪ್ಲಸ್ ಟು ಕಾಮರ್ಸ್ ವಿಭಾಗದ ಹಳೆ ವಿದ್ಯಾರ್ಥಿಗಳ ಒಕ್ಕೂಟ ಅಜಾನೂರಿನ ಎರಡು ಕುಟುಂಬಗಳಿಗೆ ಟಿ.ವಿ. ನೀಡಿದೆ.
ಕಾರ್ಯಕ್ರಮದಲ್ಲಿ ವಿನಿತ್ ಅಂಬಲತ್ತರ ಅಧ್ಯಕ್ಷತೆ ವಹಿಸಿದರು. ತಕ್ಷಶಿಲಾ ಕಾಲೇಜು ಪ್ರಾಂಶುಪಾಲ ಮಾಧವನ್ ಮಾಸ್ಟರ್ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಪ್ರತಿನಿ„ಗಳಾದ ದಿಶಾ, ಸಜನ್, ಪ್ರಿಯದರ್ಶಿನಿ, ಸಜಿತ್, ಸುಜಿತ್, ಶ್ರೀನಾ, ಅನಿತಾ, ಮಿತೇಶ್, ಸಂಧ್ಯಾ, ದಿವ್ಯಾ, ಸಮಾಜ ಸೇವಾ ಕಾರ್ಯಕರ್ತರಾದ ಪದ್ಮಿನಿ, ದೇವದಾಸ್, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮೋದ್ ಪೇರೂರು ಸ್ವಾಗತಿಸಿದರು.


