ಪೆರ್ಲ: ಎಣ್ಮಕಜೆ ಪಂಚಾಯತಿ ಮಟ್ಟದ ಪೆÇೀಸ್ಟ್ ಕಾರ್ಡ್ ಅಭಿಯಾನವು ಪೆರ್ಲ ಅಂಚೆಕಚೇರಿ ಪರಿಸರದಲ್ಲಿ ಶನಿವಾರ ನಡೆಯಿತು. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಾಲಯವು ಎನ್‍ಐಎ ತನಿಖೆ ಎದುರಿಸುತ್ತಿದ್ದು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರೂಪವಾಣಿ ಆರ್ ಭಟ್ ಪೆÇೀಸ್ಟ್ ಕಾರ್ಡ್ ಅಭಿಯಾನ ಉದ್ಘಾಟಿಸಿದರು ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯಕ ಅಡ್ಕಸ್ಥಳ, ಅನಂತ ಭಟ್ ಪಡ್ಪು ದುರ್ಗಾ ಪ್ರಸಾದ್ ಸೂರಂಬೈಲು ಕಟ್ಟೆ ಮೊದಲಾದವರು ಭಾಗವಹಿಸಿದ್ದರು ಸುಮಾರು 250 ಪೆÇೀಸ್ಟ್ ಕಾರ್ಡ್ ಗಳು ಮುಖ್ಯಮಂತ್ರಿಗಳಿಗೆ ಈ ಸಂದರ್ಭ ಕಳುಹಿಸಲಾಯಿತು.


