ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ ಮುಖರ್ಜಿಯವರ ಜನ್ಮದಿನ ಹಾಗೂ ಸಮರ್ಪಣಾ ನಿ„ ಕಾರ್ಯಕ್ರಮ ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಪಂಚಾಯತ ಸಮಿತಿ ಅಧ್ಯಕ್ಷರಾದ ಕೆ.ಸುಧಾಕರ ಕಾಮತ್ ಅವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸುರೇಶ ಕುಮಾರ್ ಶೆಟ್ಟಿ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ನೇತಾರರಾದ ಸತ್ಯಶಂಕರ್ ಭಟ್, ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿಧರ ಯಾದವ, ಜಿಲ್ಲಾ ಸಮಿತಿ ಸದಸ್ಯರಾದ ವಿನೋದ್, ಜನ ಪ್ರತಿನಿಧಿಗಳಾದ ಹರೀಶ್ ಗಟ್ಟಿ, ಪುಷ್ಪಲತ, ಯುವ ಮೋರ್ಚಾ ಪಂಚಾಯತ್ ಅಧ್ಯಕ್ಷ ಪ್ರದೂಷ, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ, ಒಬಿಸಿ ಮಂಡಲ ಸದಸ್ಯರಾದ ಬಾಬು ಗಟ್ಟಿ ಭಾಗವಹಿಸಿದರು. ಪಂಚಾಯತ್ ಸಮಿತಿ ಕಾರ್ಯದರ್ಶಿ ವಿವೇಕಾನಂದ ಸ್ವಾಗತಿಸಿದರು. ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ವಂದಿಸಿದರು.


