HEALTH TIPS

ಟ್ರಿಪಲ್ ಲಾಕ್‍ಡೌನ್: ಪ್ಲಸ್ ಟು ಫಲಿತಾಂಶ ಮುಂದೂಡುವ ಸಾಧ್ಯತೆ

   
                 ಕುಂಬಳೆ: ತಿರುವನಂತಪುರದಲ್ಲಿ ಟ್ರಿಪಲ್ ಲಾಕ್‍ಡೌನ್ ಘೋಷಣೆಯೊಂದಿಗೆ, ಈ ವರ್ಷ ಪ್ಲಸ್ ಟು ಫಲಿತಾಂಶಗಳು ವಿಳಂಬವಾಗಲಿವೆ ಎಂದು ತಿಳಿದುಬಂದಿದೆ. ಲಾಕ್ ಡೌನ್ ನಿಂದ ತಿರುವನಂತಪುರ ನಗರದಲ್ಲಿ ಮತ್ತೆ ಟ್ರಿಪಲ್ ಲಾಕ್ ಡೌನ್ ಹೇರಲ್ಪಟ್ಟಿರುವುದರಿಂದ ಮೌಲ್ಯ ಮಾಪನ ಕ್ರಮೀಕರಣದಂತಹ ಕ್ರಮಗಳು ನಿಧಾನಗೊಳ್ಳುತ್ತಿದೆ ಎಂದು ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯ ಪ್ರಕಟಿಸಿದೆ. ತಿರುವನಂತಪುರದಲ್ಲಿ ಹೇರಲಾದ ಟ್ರಿಪಲ್ ಲಾಕ್ ಡೌನ್ ಹಿಂತೆಗೆದ ಬಳಿಕವೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ನಿರ್ದೇಶನಾಲಯವು ತಿಳಿಸಿದೆ.
               ಹೈಯರ್ ಸೆಕೆಂಡರಿ ಮೌಲ್ಯ ಮಾಪನಗಳು ಈಗಾಗಲೇ ಪೂರ್ಣಗೊಂಡಿದೆ. ಆದರೆ ಪರೀಕ್ಷಾ ಮಂಡಳಿಯು ಇನ್ನೂ ಫಲಿತಾಂಶಗಳನ್ನು ಪ್ರಕಟಿಸಲು ಆದೇಶ ನೀಡಿಲ್ಲ.ಉದ್ಯೋಗಸ್ಥರ ಕೊರತೆಯೂ ಇದೆ. ಈ ಮಧ್ಯೆ ಮತ್ತೆ ನಗರದಲ್ಲಿ ಟ್ರಿಪಲ್ ಲಾಕ್ ಡೌನ್ ಘೋಷಿಸಲಾಗಿದೆ. ಮಂಡಳಿಯು ಒಂದು ವಾರದವರೆಗೆ ಯಾವುದೇ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಶಿಕ್ಷಣ ನಿರ್ದೇಶನಾಲಯದ ಅಧಿಕೃತರು ತಿಳಿಸಿದ್ದಾರೆ. ಹೈಯರ್ ಸೆಕೆಂಡರಿ ಬೋರ್ಡ್ ಸಭೆ ನಡೆಸಿ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದರೂ  ಉಳಿದ ವಿಷಯಗಳನ್ನು ಪೂರ್ತಿಗೊಳಿಸಲು ಕನಿಷ್ಠ ನಾಲ್ಕು ದಿನಗಳಾದರೂ ಬೇಕಾಗುವುದರಿಂದ ಜುಲೈ 16 ಅಥವಾ 17 ರಂದು ಫಲಿತಾಂಶ ಘೋಷಿಸಲು ಸಾಧ್ಯವಾಗುವುದು. ಆದರೆ ಇದು ಲಾಕ್‍ಡೌನ್ ನಿಯಮಗಳನ್ನು ಅವಲಂಬಿಸಿರುತ್ತದೆ ಎಂದು ಅವರು ಅಧಿಕೃತರು ತಿಳಿಸಿದ್ದಾರೆ.
              ತಿರುವನಂತಪುರ ನಗರದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಒಂದು ವಾರದವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಕೋವಿಡ್ ತಡೆಗಟ್ಟುವ ಉಪಕ್ರಮದ ಭಾಗವಾಗಿ, ಜನರ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳು ಮಾತ್ರ ಲಭ್ಯವಿದೆ.
           ಕೋವಿಡ್ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಸಾಮೂಹಿಕ ಹರಡುವಿಕೆಗೆ ಒಳಗಾಗಬಹುದೆಂದು ರಾಜ್ಯ ಸರ್ಕಾರ ಅಂದಾಜಿಸಿದೆ.
            ಪ್ಲಸ್ ಟು ಹಾಗೂ ಪೊಕೇಶನಲ್ ಹೈಯರ್ ಸೆಕೆಂಡರಿಗಳ ಫಲಿತಾಂಶವನ್ನು ಜುಲೈ ಮೊದಲ ವಾರದಲ್ಲಿ ಪ್ರಕಟಿಸಲಾಗುವುದೆಂದು ಈ ಮೊದಲು ಘೋಷಿಸಲಾಗಿತ್ತು. keralaresults.nic.inresults.itschool.gov.indhsekerala.gov.inಮತ್ತು prd.kerala.gov.in   ಮೂಲಕ ಫಲಿತಾಂಶಗಳನ್ನು ನೋಡಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries