HEALTH TIPS

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಲಹಾ ಗುಂಪಿಗೆ ಭಾರತೀಯ ಮೂಲದ ಅರ್ಚನಾ ಸೊರೆಂಗ್!

          ಯುನೈಟೆಡ್ ನೇಷನ್ಸ್: ಭಾರತದ ಹವಾಮಾನ ಕಾರ್ಯಕರ್ತೆಯಾಗಿರುವ  ಅರ್ಚನಾ ಸೊರೆಂಗ್ ಅವರನ್ನು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ತಮ್ಮ ನೂತನ ಅಡ್ವೈಸರಿ ಗ್ರೂಪ್ ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅರ್ಚನಾ ಅವರು  ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ತಮ್ಮ ದೃಷ್ಟಿಕೋನ ಹಾಗೂ ಪರಿಹಾರಗಳನ್ನು ನೀಡಲಿದ್ದಾರೆ. ಈ ಅಂತರಾಷ್ಟ್ರೀಯ ಸಮಿತಿಯು ಕೋವಿಡ್ ನಂತರದಲ್ಲಿ ಜಗತ್ತಿನ ಚೇತರಿಕೆ ಪ್ರಯತ್ನಗಳನ್ನು ನಡೆಸಲಿದೆ, 
        ಸೊರೆಂಗ್ 18 ರಿಂದ 28 ವರ್ಷ ವಯಸ್ಸಿನ ಇತರ ಆರು ಯುವ ಹವಾಮಾನ ಸಂಶೋಧಕರಿಡನೆ ಸೇರಲಿದ್ದಾರೆ. ಅವರನ್ನು ಗುಟೆರೆಸ್ ಅವರು ಹವಾಮಾನ ಬದಲಾವಣೆಯ ಹೊಸ ಯುವ ಸಲಹಾ ಗುಂಪಿಗೆ ಹೆಸರಿಸಿದ್ದಾರೆ.
         ಸೊರೆಂಗ್ "ವಕಾಲತ್ತು ಮತ್ತು ಸಂಶೋಧನೆಯಲ್ಲಿ ಅನುಭವಿ, ಮತ್ತು ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಸ್ಕೃತಿಕ ಅಭ್ಯಾಸಗಳನ್ನು ದಾಖಲಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸುವ ಕೆಲಸ ಮಾಡುತ್ತಾರೆ " ಎಂದು ಯುಎನ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
         "ನಮ್ಮ ಪೂರ್ವಜರು ತಮ್ಮ ಸಾಂಪ್ರದಾಯಿಕ ಜ್ಞಾನ ಮತ್ತು ಅಭ್ಯಾಸಗಳ ಮೂಲಕ ಅರಣ್ಯ ಮತ್ತು ಪ್ರಕೃತಿಯನ್ನು ಯುಗಯುಗದಿಂದ ರಕ್ಷಿಸುತ್ತಿದ್ದಾರೆ.ಹವಾಮಾನ ಬಿಕ್ಕಟ್ಟನ್ನು ಎದುರಿಸುವ ಸವಾಲು ಈಗ ನಮ್ಮ ಮುಂದಿದೆ.  "ಎಂದು 24 ವರ್ಷದ ಸೊರೆಂಗ್ ಹೇಳಿದ್ದಾರೆ, ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಮುಂಬೈನಿಂದ ರೆಗ್ಯುಲೇಟರಿ ಗವರ್ನೆನ್ಸ್  ಅಧ್ಯಯನ ಮಾಡಿದ್ದಾರೆ ಮತ್ತು ಟಿಐಎಸ್ಎಸ್ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ
          ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವ ಜಾಗತಿಕ ಕ್ರಮ ಮತ್ತು ಮಹತ್ವಾಕಾಂಕ್ಷೆಯನ್ನು ತ್ವರಿತಗೊಳಿಸುವ ಬಗ್ಗೆ ಯುವ ಕಾರ್ಯಕರ್ತರು ನಿಯಮಿತವಾಗಿ ಯುಎನ್ ಮುಖ್ಯಸ್ಥರಿಗೆ ಸಲಹೆ ನೀಡುತ್ತಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries