ನವದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ಕೊರೋನಾ ಟೆಸ್ಟ್ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಪಾಸಿಟಿವ್ ಸಂಖ್ಯೆ ಶೇ.30ರಿಂದ ಶೇ.10ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ಕೊರೋನಾ ಟೆಸ್ಟ್ ಸಂಖ್ಯೆ ಪೈಕಿ ಕೇವಲ 6.73ರಷ್ಟು ಮಾತ್ರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ಅಔಗಿIಆ-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ, ರಾಜ್ಯ ಮತ್ತು ಕೇಂದ್ರ ಪ್ರದೇಶದ ಸರ್ಕಾರಗಳು ಜಂಟಿ ಮತ್ತು ಸಂಘಟಿತ ಪ್ರಯತ್ನವನ್ನು ಮಾಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸಂಘಟಿತ ಪ್ರಯತ್ನಗಳ ಭಾಗವಾಗಿ, ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಪರೀಕ್ಷೆ, ತ್ವರಿತ ಸಂಪರ್ಕ ಪತ್ತೆ ಮತ್ತು ಪ್ರಕರಣಗಳ ಸಮಯೋಚಿತ ಕ್ಲಿನಿಕಲ್ ನಿರ್ವಹಣೆಗೆ ಒತ್ತು ನೀಡಿತ್ತು. ರಾಜ್ಯ ಸರ್ಕಾರಗಳು ಪರೀಕ್ಷಾ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದು ದೇಶದಲ್ಲಿ ಪಾಸಿಟಿವ್ ದರವನ್ನು ಕಡಿಮೆ ಮಾಡಲು ಕಾರಣವಾಗಿದೆ ಮತ್ತು ದೇಶದಲ್ಲಿನ ಪಾಸಿಟಿವ್ ದರವು ಶೇಕಡಾ 6.73 ರಷ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪುದುಚೇರಿ(ಶೇ.5.55), ಚಂಡೀಗಢ(ಶೇ.4.36), ಅಸ್ಸಾಂ(ಶೇ.2.84), ತ್ರಿಪುರ(ಶೇ.2.72), ಕರ್ನಾಟಕ(ಶೇ.2.64), ರಾಜಸ್ಥಾನ(ಶೇ.2.51), ಗೋವಾ(ಶೇ.2.5), ಮತ್ತು ಪಂಜಾಬ್(ಶೇ.1.9)ನಲ್ಲಿ ಪಾಸಿಟಿವ್ ದರ ಇಷ್ಟಿದೆ.


