ಪೆರ್ಲ: ಎಣ್ಮಕಜೆ ಪಂಚಾಯತಿ ಬಿಜೆಪಿ ಸಮಿತಿಯ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿಯ ಅಂಗವಾಗಿ ಸೋಮವಾರ ಪೆರ್ಲದಲ್ಲಿ ಪುಷ್ಪಾರ್ಚನೆ ನಡೆಯಿತು.
ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು. ಹಿರಿಯ ಕಾರ್ಯಕರ್ತ ಹರಿಶ್ಚಂದ್ರ ಆಚಾರ್ಯ ಅವರು ಶ್ಯಾಮ್ ಪ್ರಸಾದ್ ಅವರನ್ನು ಸ್ಮರಿಸಿದರು. ಬಿಜೆಪಿ ಪಂಚಾಯತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಭಟ್, ಸುರೇಶ್ ವಾಣೀನಗರ್, ಶ್ಯಾಮಲಾ ಪತ್ತಡ್ಕ, ನಾರಾಯಣ ನಾಯ್ಕ್ ಅಡ್ಕಸ್ಥಳ, ಸವಿತಾ ಬಾಳಿಕೆ, ಲಲಿತಾ ಕೇಶವ್, ಮಲ್ಲಿಕಾ ರೈ, ಉಪಸ್ಥಿತರಿದ್ದರು.


