ಬದಿಯಡ್ಕ: ರಾಜ್ಯ ವ್ಯಾಪಕವಾಗಿ ಮತ್ತೆ ತೀವ್ರತೆ ಪಡೆದಿರುವ ಕೊರೊನಾ ಭೀತಿಯ ಮಧ್ಯೆ ಸೋಮವಾರದಿಂದ ಕನ್ನಡ ಮಾಧ್ಯಮ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಠ್ಯ ಪುಸ್ತಕಗಳ ವಿತರಣೆ ಆರಂಭಗೊಂಡಿದೆ. ಪ್ರಸ್ತುತ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳನ್ನು ಅನುಸರಿಸುತ್ತಿದ್ದರೂ ಪಠ್ಯ ಪುಸ್ತಕಗಳನ್ನು ವಿತರಿಸಲು ಸರ್ಕಾರ-ವಿದ್ಯಾಭ್ಯಾಸ ಇಲಾಖೆ ಮುತುವರ್ಜಿ ವಹಿಸಿದೆ.
ಕೋವಿಡ್ ನಿಬಂಧನೆಯ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿವಿಧ ಸಮಯಾನುಸಾರ ಶಾಲೆಗಳಿಗೆ ಕರೆಸಿ ಪಠ್ಯ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಯಾವ ಕಾರಣಕ್ಕೂ ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ತಾಕೀತು ಮಾಡಿರುವ ಅಧಿಕೃತರು ಹೆತ್ತವರಲ್ಲಿ ಆರೋಗ್ಯವಂತ ಓರ್ವ ವ್ಯಕ್ತಿ ಮಾತ್ರ ನಿಗದಿತ ಸಮಯದಲ್ಲಿ ಶಾಲೆಗಳಿಗೆ ಆಗಮಿಸಿ ಪುಸ್ತಕ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸೋಮವಾರ 1 ನೇತರಗತಿಂದ 4ನೇ ತರಗತಿ ವರೆಗಿನ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಇಂದು(ಮಂಗಳವಾರ)ಹಿರಿಯ ಪ್ರಾಥಮಿಕ ಹಾಗೂ ನಾಳೆ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುತ್ತಿದ್ದು ಕೆಲವು ಶಾಲೆಗಳು ತಮ್ಮ ಅನುಕೂಲದ ಸಮಯಗಳಲ್ಲಿ ಈ ವಾರ ಮುಗಿಯುವ ಮೊದಲು ಪುಸ್ತಕ ವಿತರಿಸುವ ಕ್ರಮ ಕೈಗೊಂಡಿದೆ.
ಬೇಳ ಸಂತ ಬಾರ್ತಲೋಮಿಯ ಹಿರಿಯ ಬುನಾದಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಭಗಿನಿ ನಿವೇದಿತಾ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಕೋವಿಡ್ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವ ಬ್ರೇಕ್ ದಿ ಚೈನ್ ವ್ಯವಸ್ಥೆ ಏರ್ಪಡಿಸಲಾಗಿತ್ತು.