HEALTH TIPS

ಕರ್ನಾಟಕದಲ್ಲಿ ಸೆ.1 ರಿಂದ ದೇವಾಲಯಗಳಲ್ಲಿ ಕೆಲ ಸೇವೆಗಳಿಗೆ ಅವಕಾಶ ಸಾಧ್ಯತೆ

      ಮಂಗಳೂರು: ಸೆಪ್ಟೆಂಬರ್ 1 ರಿಂದ ಕರ್ನಾಟಕ  ರಾಜ್ಯದ ದೇವಾಲಯಗಳಲ್ಲಿ ಕೆಲ ಸೇವೆಗಳಿಗೆ ಅವಕಾಶ ನೀಡುವ ಸಾಧ್ಯತೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಹೇಳಿದ್ದಾರೆ.

         ಇಂದು ಮಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೆಪ್ಟೆಂಬರ್ 1 ರಿಂದ ದೇವಾಲಯಗಳಲ್ಲಿ ಕೆಲವು ಸೇವೆಗಳಿಗೆ ಅವಕಾಶ ನೀಡುವ ಸಂಬಂಧ ಮುಜರಾಯಿ ಇಲಾಖೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದೆ ಎಂದು ತಿಳಿಸಿದರು.

    ಆರೋಗ್ಯ ಇಲಾಖೆಯು ಕೆಲ ಸೇವೆಗಳನ್ನು ಪುನಾರಂಭಿಸಬಹುದು ಎಂದು ಶಿಫಾರಸು ಮಾಡಿದರೆ ಮಾತ್ರ ದೇವಾಲಯಗಳಲ್ಲಿ ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

    ಆದಾಗ್ಯೂ, ಕೋವಿಡ್-19 ಹರಡುವುದನ್ನು ತಡೆಯಲು ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಮತ್ತು ಜನಸಂದಣಿಗೆ ಅನುಮತಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries