HEALTH TIPS

ಭಾರತ-ಪಾಕಿಸ್ತಾನ ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಯೋಧರು

          ಶ್ರೀನಗರ, ಆಗಸ್ಟ್ 29: ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಸುರಂಗವನ್ನು ಪತ್ತೆ ಹಚ್ಚಿದ್ದಾರೆ.

         ಸಾಂಭಾ ಜಿಲ್ಲೆಯಲ್ಲಿ ಈ ಸುರಂಗ ಕಂಡು ಬಂದಿದೆ. ಸುರಂಗವು 25 ಅಡಿ ಆಳವಿದ್ದು, 150 ಮೀಟರ್ ಅಷ್ಟು ಉದ್ದವಿದೆ. ಮರಳು ಚೀಲ ಹಾಗೂ ಕರಾಚಿ, ಶಕ್ಕೇರ್‌ಗಢದ ಕೆಲವು ಮಾರ್ಕಿಂಗ್‌ಗಳು ಲಭ್ಯವಾಗಿವೆ.

     ಇಂತಹ ಸುರಂಗದಿಂದ ಉಗ್ರರು ಒಳನುಸುಳುವ ಸಾಧ್ಯತೆ ಇರುವುದರಿಂದ ಸುತ್ತಮಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಮ್ಮುವಿನ ಬಳಿ ಇದಕ್ಕೂ ಮೊದಲು ಕೂಡ ಒಂದು ಸುರಂಗ ಪತ್ತೆಯಾಗಿತ್ತು.

    2012ರಲ್ಲಿ ಬಿಎಸ್‌ಎಫ್ ಯೋಧರು 400 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿದ್ದರು. 2014ರಲ್ಲಿ ಪಲನ್‌ವಾಲಾ ಸೆಕ್ಟರ್ ಬಳಿ ಕೂಡ ಇಂತದ್ದೇ ಸುರಂಗ ಪತ್ತೆಯಾಗಿತ್ತು.ಅದೇ ವರ್ಷ ಸಾಂಬಾದ ಚಿಲ್ಯಾರಿ ಪ್ರದೇಶದಲ್ಲಿ ಮತ್ತೊಂದು ಸುರಂಗವನ್ನು ಪತ್ತೆ ಮಾಡಲಾಗಿತ್ತು. ಭಾರತದ ಭೂಭಾಗದಲ್ಲಿ ಸುಮಾರು 25 ಮೀಟರ್‌ನಷ್ಟು ಸುರಂಗ ತೋಡಿದ್ದರು.

      ಮಾರ್ಚ್ 2017ರಲ್ಲಿ 30 ಮೀಟರ್ ಉದ್ದದ ಪಾಕಿಸ್ತಾನದಿಂದ ಆರಂಭವಾಗಿದ್ದ ಸುರಂಗವು ಪತ್ತೆಯಾಗಿತ್ತು. 2017ರಲ್ಲಿ ಸಾಂಬಾ ಸೆಕ್ಟರ್‌ನ ಆರ್‌ಎಸ್ ಪುರದಲ್ಲಿ ಕೂಡ ಸುರಂಗ ಕಾಣಿಸಿತ್ತು.


      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries