HEALTH TIPS

ಕೋವಿಡ್ ಅಪ್ ಡೇಟ್- ಇಂದು ರಾಜ್ಯದಲ್ಲಿ 2154 ಜನರಿಗೆ ಸೋಮಕು-1766 ಮಂದಿ ಗುಣಮುಖ

       

        ತಿರುವನಂತಪುರ: ರಾಜ್ಯದಲ್ಲಿ ಇಂದು 2154 ಹೊಸ ಕೋವಿಡ್ ಬಾಧಿತರನ್ನು  ಗುರುತಿಸಲಾಗಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1766 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಸಂಪರ್ಕದ ಮೂಲಕ 1962 ಜನರಿಗೆ ಸೋಂಕು ತಗಲಿದೆ. ಮೂವತ್ತಮೂರು ಆರೋಗ್ಯ ಕಾರ್ಯಕರ್ತರು ಇಂದು ಸೋಂಕಿಗೆ ಒಳಗಾಗಿರುವರು.  ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,99,468 ಜನರು ಕ್ವಾರಂಟೈನ್ ನಲ್ಲಿರುವರು.  

            ಏಳು ಸಾವುಗಳು:

     ಕೋವಿಡ್ -19 ರ ಕಾರಣದಿಂದಾಗಿ ಏಳು ಸಾವುಗಳು ಇಂದು ದೃಢಪಟ್ಟಿದೆ. ಪಶ್ಚಿಮ ಬಂಗಾಳದ ಅತಿಥಿ ಕೆಲಸಗಾರ ಸನತನ್ ದಾಸ್ (49) ಆಗಸ್ಟ್ 26 ರಂದು ನಿಧನರಾದರು, ಕಣ್ಣೂರು ಕೊಟ್ಟಾಯಂ ಮಲಬಾರ್ ನ ಆನಂದನ್ (64), ಕಣ್ಣೂರಿನ ಇರಿಟ್ಟಿ ಮೂಲದ ಅನ್ನಮ್ಮ (90) ಆಗಸ್ಟ್ 24 ರಂದು ನಿಧನರಾದರು, ಪಾರಶಾಲ ತಿರುವತಂಪುರ ಮೂಲದ ಪಲಯನ್ (64), ಮತ್ತು ಅಮ್ಮಿನ್ (63),  ಆಗಸ್ಟ್ 17 ರಂದು ನಿಧನರಾದ ಕಾಸರಗೋಡು ಚಂದ್ರಗಿರಿಯ ಸುಬೈರ್ ಮುಹಮ್ಮದ್ ಕುಂಞÂ (40) ಮತ್ತು ಆಗಸ್ಟ್ 23 ರಂದು ನಿಧನರಾದ ಕೋಝಿಕ್ಕೋಡ್ ನ ಚಂದ್ರನ್ (66) ಎಂದು ಗುರುತಿಸಲಾಗಿದೆ. ಈವರೆಗೆ ರಾಜ್ಯಾದ್ಯಂತ  ಒಟ್ಟು ಸಾವಿನ ಸಂಖ್ಯೆಯನ್ನು 287 ಕ್ಕೆ ಏರಿಸಿದೆ. 

           ಕೋವಿಡ್ ಬಾಧಿತರ ಜಿಲ್ಲಾವಾರು ವಿವರ: 

    ತಿರುವನಂತಪುರ ಜಿಲ್ಲೆ 310, ಕೋಝಿಕ್ಕೋಡ್ 304, ಎರ್ನಾಕುಳಂ 231 , ಕೊಟ್ಟಾಯಂ 223 , ಮಲಪ್ಪುರಂ 195 , ಕಾಸರಗೋಡು 159 , ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಯ 151 ಮತ್ತು ಪತ್ತನಂತಿಟ್ಟು 133, ಕಣ್ಣೂರು 112,  ಆಲಪ್ಪುಳ  92 , ಪಾಲಕ್ಕಾಡ್ 45 , ಇಡುಕ್ಕಿ 35 ಮತ್ತು ವಯನಾಡ್ 13 ಜನರಿಗೆ ಇಂದು ಸೋಂಕು ಬಾಧಿಇಸದೆ. 

       ಸಂಪರ್ಕದಿಂದ ಸೋಂಕು:

    ಸಂಪರ್ಕದ ಮೂಲಕ 1962 ಜನರಿಗೆ ಸೋಂಕು ತಗಲಿದೆ. ಅವುಗಳಲ್ಲಿ 174 ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 305, ಕೋಝಿಕ್ಕೋಡ್ 292, ಕೊಟ್ಟಾಯಂ  212, ಎರ್ನಾಕುಳಂ 202, ಮಲಪ್ಪುರಂ 184, ತ್ರಿಶೂರ್ 145, ಕೊಲ್ಲಂ 142, ಪತ್ತನಂತಿಟ್ಟು 107,  ಕಾಸರಗೋಡು 139. ಕಣ್ಣೂರು 107 , ಕಣ್ಣೂರು 90, ಆಲಪ್ಪುಳ 88 , ಪಾಲಕ್ಕಾಡ್  26 , ಇಡುಕ್ಕಿ 23 ಮತ್ತು ವಯನಾಡ್ ಜಿಲ್ಲೆಯ 7 ಜನರು ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. 

      1766 ಮಂದಿ ಗುಣಮುಖ: 

    ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1766 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ ಜಿಲ್ಲೆಯ 161, ಕೊಲ್ಲಂ ಜಿಲ್ಲೆಯ 53, ಪತ್ತನಂತಿಟ್ಟು ಜಿಲ್ಲೆಯ 132 , ಆಲಪ್ಪುಳ ಜಿಲ್ಲೆಯ 258 , ಕೊಟ್ಟಾಯಂ ಜಿಲ್ಲೆಯ 72 , ಇಡುಕ್ಕಿ ಜಿಲ್ಲೆಯ 45 , ಎರ್ನಾಕುಳಂ ಜಿಲ್ಲೆಯ 182 , ತ್ರಿಶೂರ್ ಜಿಲ್ಲೆಯ 115, ಪಾಲಕ್ಕಾಡ್ ಜಿಲ್ಲೆಯ 115 , ಮಲಪ್ಪುರಂ ಜಿಲ್ಲೆಯ 64 , ಕೋಝಿಕ್ಕೋಡ್ ಜಿಲ್ಲೆಯಿಂದ 110,  ವಯನಾಡ್ ಜಿಲ್ಲೆಯಿಂದ 22 , ಕಣ್ಣೂರು ಜಿಲ್ಲೆಯಿಂದ 113 ಮತ್ತು ಕಾಸರಗೋಡು ಜಿಲ್ಲೆಯ 111 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿ ಗುಣಮುಖರಾದರು. ಇದರೊಂದಿಗೆ 23,658 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 49,849 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

            ಓಣಂ ಹಿನ್ನೆಲೆಯಲ್ಲಿ ಅನಗತ್ಯ ಪ್ರಯಾಣ ಬೇಡ: 

      ರಾಜ್ಯದಲ್ಲಿ ಓಣಂ ದಟ್ಟಣೆಯನ್ನು ನಿಯಂತ್ರಿಸಲು ಪೆÇಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಅಂಗಡಿಗಳನ್ನು ತೆರೆಯುವಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಅಂಗಡಿಗಳನ್ನು ತೆರೆಯಲು ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕು. ಅಂಗಡಿಯೊಳಗೆ  ಜನರಿಗೆ ಪ್ರವೇಶ ನಿಚೇಧಿಸಬೇಕು, ಎಷ್ಟು ಜನರು ಅಂಗಡಿಗೆ ಪ್ರವೇಶಿಸಬಹುದು ಎಂಬ ಮಾಹಿತಿಯನ್ನು ಹೊರಭಾಗದಲ್ಲಿ ಬರೆಯಬೇಕು. ಸಾಮಾಜಿಕ ದೂರವನ್ನು ಉಳಿಸಿಕೊಳ್ಳಲು ಅಂಗಡಿಯ ಹೊರಭಾಗವನ್ನು ವಿಶೇಷ ವಲಯ ಅಥವಾ ರೇಖೆಯಿಂದ ಗುರುತಿಸಬೇಕು. ಮಾಸ್ಕ್  ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಆಯಾ ಪ್ರದೇಶಗಳ ಪೆÇಲೀಸ್ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಮಾಲ್‍ಗಳು ಮತ್ತು ಹೈಪರ್‍ಮಾರ್ಕೆಟ್‍ಗಳನ್ನು ತೆರೆಯಬಹದು. ಮನೆ ವಿತರಣಾ ವ್ಯವಸ್ಥೆಯನ್ನು ಉತ್ತೇಜಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಜನರು ಒಟ್ಟುಗೂಡಬಾರದು. ಕಂಟೋನ್ಮೆಂಟ್ ವಲಯದಲ್ಲಿ ನಿಯಂತ್ರಣ ಮುಂದುವರಿಯಲಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.


      


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries