HEALTH TIPS

ಹಬ್ಬಗಳ ನಡುವೆ ಕೊರೋನಾ ಬಗ್ಗೆ ಎಚ್ಚರಿಕೆ ಇರಲಿ, ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿರಲಿ:ಪ್ರಧಾನಿ ನರೇಂದ್ರ ಮೋದಿ-ಕುಟುಕಿಡ್ಸ್ ಲರ್ನಿಂಗ್ ಆಪ್:ಉಲ್ಲೇಖ

     ನವದೆಹಲಿ: ಈಗ ಹಬ್ಬ, ಉತ್ಸವಗಳ ಸಮಯ, ಅವುಗಳನ್ನು ಸಂತೋಷ, ಸಂಭ್ರಮಗಳಿಂದ ಆಚರಿಸುವುದರ ಮಧ್ಯೆ ಕೊರೋನಾ ವೈರಸ್ ಹೆಚ್ಚುತ್ತಿರುವುದನ್ನು ಮರೆಯಬೇಡಿ, ಜನರು ಇನ್ನಷ್ಟು ಜಾಗರೂಕತೆಯಿಂದ ಇರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

      ಅವರು ಇಂದು ಆಕಾಶವಾಣಿ ರೇಡಿಯೊದಲ್ಲಿ ತಮ್ಮ ತಿಂಗಳ ಕೊನೆಯ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 78 ಸಾವಿರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದರಿಂದ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 35 ಲಕ್ಷ ಗಟಿ ದಾಟಿದೆ. ಬ್ರೆಜಿಲ್ ದೇಶದಲ್ಲಿ 38 ಲಕ್ಷ ಸೋಂಕಿತರಿದ್ದು ಅದಕ್ಕೆ ಹತ್ತಿರದಲ್ಲಿಯೇ ನಮ್ಮ ದೇಶ ಇದೆ. ಕೊರೋನಾ ವೈರಸ್ ಬಂದ ಮೇಲೆ ಲಾಕ್ ಡೌನ್ ಆದ ಮೇಲೆ ಜನರಲ್ಲಿ ಶಿಸ್ತಿನ ಪ್ರಜ್ಞೆ ಹೆಚ್ಚಾಗಿದೆ. ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ ಎಂದು ದೇಶವಾಸಿಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.

     ಮುಂಬರುವ ದಿನಗಳಲ್ಲಿ ಹಬ್ಬಹರಿದಿನಗಳು ಹೆಚ್ಚಾಗುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಶಿಸ್ತಿನ ಭಾವನೆ ಹೆಚ್ಚಾಗುತ್ತಿದೆ, ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ. ಜನರು ಮುಂಜಾಗ್ರತೆ, ಸುರಕ್ಷತೆ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ವೈರಸ್ ನ್ನು ನಾವು ಗೆಲ್ಲಬಹುದು. 2 ಮೀಟರ್ ಅಂತರವನ್ನು ಕಡ್ಡಾಯವಾಗಿ ಪಾಲಿಸಿ ಎಂದರು.

      ಇಂದು ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಶೋಧನೆ,ಹೊಸದನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಒಟ್ಟಾಗಿ ಸೇರಿ ಹೊಸದನ್ನು ಶೋಧಿಸುತ್ತಾರೆ.ಸಂಶೋಧನೆ, ಪರಿಹಾರದಲ್ಲಿ ಭಾರತೀಯರ ಸಾಮರ್ಥ್ಯ ಪ್ರತಿಯೊಬ್ಬರಿಗೂ ಗೊತ್ತಿದೆ. ಜನರಲ್ಲಿ ನಿಷ್ಠೆ, ಶ್ರದ್ಧೆ, ಶಕ್ತಿ ಸಾಕಷ್ಟಿದೆ. 

       ಕುಟುಕಿಡ್ಸ್ ಲರ್ನಿಂಗ್ ಆಪ್: ಆತ್ಮನಿರ್ಭರ ಆಪ್ ನಲ್ಲಿ ಸಂಶೋಧನಾ ಸವಾಲಿದ್ದು ಕುಟುಕಿಡ್ಸ್ ಕಲಿಕೆ ಆಪ್ ಇದೆ. ಇದು ಸಂವಹನಾತ್ಮಕ ಆಪ್ ಆಗಿದ್ದು ಈ ಮೂಲಕ ಮಕ್ಕಳು ಗಣಿತ, ವಿಜ್ಞಾನ ವಿಷಯಗಳನ್ನು ಹಾಡು, ಕಥೆಗಳ ಮೂಲಕ ಸುಲಭವಾಗಿ ಆಸಕ್ತಿಕರವಾಗಿ ಕಲಿಯಬಹುದು.

     ಸ್ಟೆಪ್ ಸೆಟ್ ಗೊ ಎನ್ನುವ ಮತ್ತೊಂದು ಆಪ್ ಇದ್ದು, ಇದು ಫಿಟ್ ನೆಸ್ ಆಪ್ ಆಗಿದೆ. ನೀವು ಎಷ್ಟು ನಡೆದಿದ್ದೀರಿ, ಎಷ್ಟು ಕ್ಯಾಲರಿ ಕಳೆದುಕೊಂಡಿದ್ದೀರಿ ಎಂದು ತೋರಿಸುತ್ತದೆ. ನೀವು ಆರೋಗ್ಯವಾಗಿ, ಸದೃಢವಾಗಿ ಇರಲು ಈ ಆಪ್ ಉತ್ತೇಜನ ನೀಡುತ್ತದೆ ಎಂದರು.
     ಹಲವು ಉದ್ಯಮ ಆಪ್ ಗಳಿವೆ. ಈಕ್ವಲ್ ಟು, ಬುಕ್ಸ್ ಅಂಡ್ ಎಕ್ಸ್ ಪೆನ್ಸ್, ಜೊಹೊ ವರ್ಕ್ ಪ್ಲೇಸ್, ಎಫ್ ಟಿಸಿ ಟಾಲೆಂಟ್ ಇತ್ಯಾದಿ. ಅವುಗಳನ್ನು ನೆಟ್ ಲ್ಲಿ ಹುಡುಕಿ ಅದರಲ್ಲಿ ಸಾಕಷ್ಟು ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಸಿಗುತ್ತವೆ ಎಂದು ಪ್ರಧಾನಿ ಹೇಳಿದರು.

     ಭಾರತೀಯ ತಳಿ ನಾಯಿಗಳು ತುಂಬಾ ದಕ್ಷವಾಗಿ, ಚುರುಕಾರಿ ಇರುತ್ತದೆ. ಅವುಗಳನ್ನು ಸಾಕಿ, ಬೆಳೆಸಲು ಬೇರೆ ನಾಯಿಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ಭಾರತದ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ. ನಮ್ಮ ಸೇನೆಯಲ್ಲಿ ಕೂಡ ಅವುಗಳಿಗೆ ತರಬೇತಿ ನೀಡಿ ನಾಯಿಗಳ ದಳಗಳನ್ನು ಬೆಳೆಸಲಾಗುತ್ತಿದೆ ಎಂದರು.



    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries