HEALTH TIPS

ಓಣಂ ಕಳೆ ಏರುತ್ತಿರುವಂತೆ ಏರುಗತಿಯಲ್ಲೇ ಕೋವಿಡ್ ಸೋಂಕು-ಇಂದು 2397 ಜನರಿಗೆ ಕೋವಿಡ್

       ತಿರುವನಂತಪುರ:ಕೇರಳದ ನಾಡಹಬ್ಬ ಓಣಂ ಆಚರಣೆಗೆ ಜನರು ಸಿದ್ದರಾಗುತ್ತಿರುವಂತೆ ಇಂದು ರಾಜ್ಯದಲ್ಲಿ 2397 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಡಿಸಲಾಗಿದೆ. 2225 ಮಂದಿ ಸೋಂಕಿನಿಂದ ಮುಕ್ತರಾಗಿರುವರು. ಏತನ್ಮಧ್ಯೆ, ಕೋವಿಡ್‍ನಿಂದ ಆರು ಸಾವುಗಳು ಸಂಭವಿಸಿವೆ. ತಿರುವನಂತಪುರ ಜಿಲ್ಲೆಯಲ್ಲಿ ಸೋಂಕು ತೀವ್ರಗತಿಯಲ್ಲಿ  ಹರಡುತ್ತಿರುವುಉದ ಕಳವಳ ಉಂಟುಮಾಡಿದೆ. ಇಂದು ರಾಜಧಾನಿಯಲ್ಲಿ 408 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವುಗಳಲ್ಲಿ 49 ಮೂಲಗಳು ಸ್ಪಷ್ಟವಾಗಿಲ್ಲ. ಮಲಪ್ಪುರ, ತ್ರಿಶೂರ್ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ರೋಗಿಗಳಿದ್ದಾರೆ.

             23,277 ಸಕ್ರಿಯ ಪ್ರಕರಣಗಳು:

    ಇಂದು ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 23,277 ಕ್ಕೆ ಏರಿದ್ದು, 2397 ಇಂದಿನ ಸೋಂಕಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 34,988 ಮಾದರಿಗಳನ್ನು ಪರೀಕ್ಷಿಸಲಾಯಿತು. ನಿನ್ನೆಯ ವರೆಗಿನ ವರದಿಯಂತೆ 8,69,655 ಜನರು ಇತರೆಡೆಗಳಿಂದ ಬಂದವರಾಗಿದ್ದಾರೆ. ಈ ಪೈಕಿ 3,32,582 ವಿದೇಶಗಳಿಂದ ಮತ್ತು 5,37,000 ಇತರ ರಾಜ್ಯಗಳಿಂದ ಬಂದವರು. ಅವರಲ್ಲಿ ಶೇಕಡಾ 62 ರಷ್ಟು ಜನರು ಕೋವಿಡ್ ಕೆಂಪು ವಲಯ ಜಿಲ್ಲೆಗಳವರು ಎಂದು ಸಿಎಂ ಹೇಳಿದರು.

     ಜಿಲ್ಲಾವಾರು ಕೋವಿಡ್ ಪಾಸಿಟಿವ್ ವಿವರಗಳು:

   ರಾಜ್ಯದಲ್ಲಿ ಇಂದು ಕೋವಿಡ್ ಪಾಸಿಟಿವ್ ಆದ ರೋಗಿಗಳ ಜಿಲ್ಲಾವಾರು ವಿವರಗಳಂತೆ

  ತಿರುವನಂತಪುರ-408, ಮಲಪ್ಪುರಂ-379, ಕೊಲ್ಲಂ-234, ತೃಶೂರ್-225, ಕಾಸರಗೋಡು-198, ಆಲಪ್ಪುಳ-175, ಕೋಝಿಕ್ಕೋಡ್-152, ಕೋಟ್ಟಯಂ-139, ಎರ್ನಾಕುಳಂ-136, ಪಾಲಕ್ಕಾಡ್-133, ಕಣ್ಣೂರು-95, ಪತ್ತನಂತಿಟ್ಟು-75, ಇಡುಕ್ಕಿ-27, ವಯನಾಡ್-21 ಮಂದಿಗಳಿಗೆ ಸೋಂಕು ಪತ್ತೆಯಾಗಿದೆ.

   ಕೋವಿಡ್ ನೆಗೆಟಿವ್ ಆದವರ ವಿವರ:

   ತಿರುವನಂತಪುರ-591, ಕೊಲ್ಲಂ-104, ಪತ್ತನಂತಿಟ್ಟು-89, ಆಲಪ್ಪುಳ-236, ಕೋಟ್ಟಯಂ-120, ಇಡುಕ್ಕಿ-41, ಎರ್ನಾಕುಳಂ-148, ತೃಶೂರ್-142, ಪಾಲಕ್ಕಾಡ್-74, ಮಲಪ್ಪುರಂ-372, ಕೋಝಿಕ್ಕೋಡ್-131, ವಯನಾಡ್-38, ಕಣ್ಣೂರು-94, ಕಾಸರಗೋಡು-45 ಮಂದಿ ಸೋಂಕಿತರ ಫಲಿತಾಂಶ ನೆಗೆಟಿವ್ ಆಗಿದೆ. ಈ ಮೂಲಕ 23,277 ಮಂದಿಗಳು ಇನ್ನೂ ಚಿಕಿತ್ಸೆಯಲ್ಲಿರುವರು. 48, 083 ಮಂದಿ ಕೋವಿಡ್ ನಿಂದ ಈವರೆಗೆ ಮುಕ್ತರಾದರು.   

         ಓಣಂ ಜನಸಂದಣಿ-ಜಾಗೃತರಾಗಿರಿ: 

    ಓಣಂ ಹಬ್ಬಾಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಕಿಕ್ಕಿರಿದ ಜನ ಸಂದಣೀಯಲ್ಲಿದ್ದು ಇದು ಕಳವಳಕಾರಿ. ಸರ್ಕಾರವು ಕೋವಿಡ್ ನಿರ್ಬಂಧಗಳ ಮತ್ತು ಮಾರ್ಗಸೂಚಿಗಳನ್ನು ಘೋಷಿಸಿದ್ದರೂ, ಹೆಚ್ಚಿನ ಜನರು ಮನೆಯಿಂದ ಹೊರಬರುತ್ತಿರುವುದು ಕಂಡುಬಂದಿದೆ. ಇದು ರಕ್ಷಣಾ ಕಾರ್ಯಾಚರಣೆಗಳಿಗೆ ಹಿನ್ನಡೆಯಾಗುತ್ತದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಪರಿಸ್ಥಿತಿಯಲ್ಲಿ, ಸಾರ್ವಜನಿಕ ದಟ್ಟಣೆಯ ಹೆಚ್ಚಳವೂ ಒಂದು ಕಾರಣವಾಗಿದೆ. ಜನರು ಸುಶಿಕ್ಷಿತರಂತೆ ವರ್ತಿಸಬೇಕು ಎಂದು ಪಿಣರಾಯಿ ವಿಜಯನ್ ತಿಳಿಸಿದರು. 

         ಅನಗತ್ಯ ಪ್ರಯಾಣ ಬೇಡ:

    ರಾಜ್ಯದ ದೈನಂದಿನ ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿರುವುದರಿಂದ ಅನಗತ್ಯ ಓಣಂ ಪ್ರವಾಸಗಳನ್ನು ತಪ್ಪಿಸಬೇಕು ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಹೇಳಿದ್ದಾರೆ. ಕಂಟೋನ್ಮೆಂಟ್ ವಲಯದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ ಮತ್ತು ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಓಣಂ ಆಚರಣೆಯನ್ನು ನಡೆಸಲು ವಿಶೇಷ ಗಮನ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ. ಜನರು ಓಣಂ ಸದ್ಯ(ಔತಣ) ಅಥವಾ ಇತರ ಸಾರ್ವಜನಿಕ ಸಮಾರಂಭಗಳ ಹೆಸರಿನಲ್ಲಿ ಒಟ್ಟುಗೂಡಬಾರದು ಎಂದು ಸೂಚಿಸಲಾಗಿದೆ.


          ದೇಶದಲ್ಲಿ 34 ಲಕ್ಷ ಕೋವಿಡ್ ಸೋಂಕು: 

     ಕೋವಿಡ್ ಸೋಂಕು  ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 76,472 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಇದು ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು 34,63,973 ಕ್ಕೆ ಏರಿಸಿದೆ. ವಿವಿಧ ಆಸ್ಪತ್ರೆಗಳಲ್ಲಿ 7,52,424 ಸಕ್ರಿಯ ಪ್ರಕರಣಗಳಿವೆ. 26,48,999 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್‍ನಿಂದಾಗಿ 1,021 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸಂಖ್ಯೆ 62,550 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

      ಡಾ. ಎ. ವೇಲುಮಾನಿ ಅವರು ತಮ್ಮ ಕಂಪನಿ ಥೈರೊಕೇರ್ ಭಾರತದಾದ್ಯಂತ ನಡೆಸಿದ 270,000 ಪ್ರತಿಕಾಯ ಪರೀಕ್ಷೆಗಳ ವಿಶ್ಲೇಷಣೆಯು ಸರಾಸರಿ ಶೇ.26 ಜನರಲ್ಲಿ ಪ್ರತಿಕಾಯಗಳ ಉಪಸ್ಥಿತಿಯನ್ನು ತೋರಿಸಿದೆ, ಇದು ಈಗಾಗಲೇ ಕರೋನವೈರಸ್ಗೆ ಒಡ್ಡಿಕೊಂಡಿದೆ ಎಂದು ಸೂಚಿಸುತ್ತದೆ.


      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries