HEALTH TIPS

ಅತ್ಯುತ್ತಮ ಜಿಲ್ಲಾಧಿಕಾರಿಗಳ ಪ್ರಶಸ್ತಿ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ!

    

       ಕಾಸರಗೋಡು: ದೇಶದ ಅತ್ಯುತ್ತಮ ಜಿಲ್ಲಾಧಿಕಾರಿಗಳಿಗೆ ಕೊಡಮಾಡುವ ಪ್ರಶಸ್ತಿಯ ಮೌಲ್ಯಮಾಪನ ಅಂತಿಮ ಹಂತದಲ್ಲಿದೆ. ಈ ಪೈಕಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಸೇರಿದಂತೆ ದೇಶದ 11 ರಾಜ್ಯಗಳ ಹನ್ನೆರಡು ಮಂದಿ ಜಿಲ್ಲಾಧಿಕಾರಿಗಳು ಪ್ರಧಾನ ಮಂತ್ರಿಗಳ ಅತ್ಯುತ್ತಮ ಜಿಲ್ಲಾಧಿಕಾರಿಗಳಿಗಿರುವ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿರುವುದಾಗಿ ತಿಳಿದುಬಂದಿದೆ. ಮುಂದಿನ ಮೂರು ದಿನಗಳಲ್ಲಿ ವಿಜೇತರನ್ನು ಘೋಷಿಸಲಾಗುವುದು ಎನ್ನಲಾಗಿದೆ.

        ಡಾ.ಡಿ.ಸಜೀತ್‍ಬಾಬು ಅವರು ಶುಕ್ರವಾರ ರಾತ್ರಿ 11.30 ಕ್ಕೆ ನಡೆದ ವಿಡಿಯೋ ಸಮ್ಮೇಳನದಲ್ಲಿ 'ಸಾರ್ವಜನಿಕ ಸೇವೆಯನ್ನು ಸುಧಾರಿಸುವುದು ಮತ್ತು ದೂರುಗಳನ್ನು ಪರಿಹರಿಸುವುದು' ಕುರಿತು ಪವರ್ ಪಾಯಿಂಟ್ ಪ್ರಸ್ತುತಿಯನ್ನು ನೀಡಿದರು. ಈ ಸಮಸ್ಯೆಗಳನ್ನು ಅಧ್ಯಯನ ಮಾಡಿರುವ ತಜ್ಞರ ಸಮಿತಿಯು ಫಲಿತಾಂಶಗಳನ್ನು ಪ್ರಕಟಿಸುತ್ತದೆ.  ಕೇರಳ, ಕರ್ನಾಟಕ, ಪಾಂಡಿಚೆರಿ ಮತ್ತು ತಮಿಳುನಾಡು ರಾಜ್ಯಗಳ ಪೈಕಿ ಡಿ ಸಜಿತ್‍ಬಾಬು ಒಬ್ಬರೇ ವೀಡಿಯೋ ಪ್ರಸ್ತುತಿ ನೀಡಿರುವರು. 

       ಕಾಸರಗೋಡು ಜಿಲ್ಲಾಧಿಕಾರಿಗಳಲ್ಲದೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ, ಅರುಣಾಚಲ ಪ್ರದೇಶದ ತವಾಂಗ್, ಬಿಹಾರದ ನವಾಡಾ, ಯಮುನಾ ನಗರ, ಮಹೇಂದ್ರಗಂಜ್, ಜಮ್ಮು ಮತ್ತು ಕಾಶ್ಮೀರದ ಗಂಧರ್ಬಲ್, ಮಹಾರಾಷ್ಟ್ರದ ಪರ್ಭಾನಿ, ಪಂಜಾಬ್ ನ  ಜಲಂಧರ್, ತೆಲಂಗಾಣದ ಸಿರೊಹಿ, ಉತ್ತರಪ್ರದೇಶದ ಜಾನ್ಸಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂತಿಮ ಸುತ್ತಿಗೆ ಆಯ್ಕೆಯಾದವರಾಗಿದ್ದಾರೆ. 

    ದಾಖಲೆ ಪತ್ರಗಳ ನಿರ್ವಹಣೆ, ತೆರಿಗೆ ಸಂಗ್ರಹ, ಕುಂದುಕೊರತೆ ಪರಿಹಾರ ನ್ಯಾಯಾಲಯ ಮತ್ತು ಪಂಚಾಯಿತಿಗಳಿಗೆ ಭೇಟಿ ನೀಡುವಂತಹ ವಿಷಯಗಳಲ್ಲಿ ಡಾ.ಡಿ.ಸಜಿತ್ ಬಾಬು ಅವರು ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವಲ್ಲಿ ನೆರವಾಗಿದೆ. ಡಾ.ಸಜಿತ್ ಬಾಬು ಅವರು ಕಳೆದ ವರ್ಷ ಇ-ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ತಿರುವನಂತಪುರ ಮೂಲದ ಸಜಿತ್ ಬಾಬು ಅವರು 2018 ರಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries