ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರಕಾರ ರಚಿಸಿರುವ ಕೋವಿಡ್ ಬ್ರಗೇಡ್ ನ ಮೊದಲ ಬ್ಯಾಚ್ ಆ.26ರಿಂದ ಕಾಸರಗೋಡು ಜಿಲ್ಲೆಯ ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ ಕಾರ್ಯನಿರತರಾಗಲಿದ್ದಾರೆ.
ತಿರುವನಂತಪುರಂ ಮೆಡಿಕಲ್ ಕಾಲೇಜಿನ ನೇತೃತ್ವದಲ್ಲಿ ನಡೆಸಲಾದ 4 ದಿನಗಳ ವಿಶೇಷ ತರಬೇತಿ ಪೂರ್ಣಗೊಳಿಸಿರುವ ಮೊದಲ ಬ್ಯಾಚ್ ನ 25 ಮಂದಿ ಆರೋಗ್ಯ ಕರ್ಯಕರ್ತರು ಈ ರೀತಿ ರಂಗಕ್ಕಿಳಿಯುವರು. ತಂಡದಲ್ಲಿ 5 ಮಂದಿ ವೈದ್ಯರು, 12 ಮಂದಿ ಸ್ಟಾಫ್ ನರ್ಸ್ ಗಳು, ತಲಾ 4 ಮಂದಿ ಪ್ರಯೋಗಾಲಯ ತಂತ್ರಜ್ಞರು, ಫಾರ್ಮ ಸಿಸ್ಟ್ ಗಳು ಇದ್ದಾರೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ವೈದ್ಯರ ಕೊರತೆ ಕಾಡುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಇವರ ಸೇವೆ ಬಲುದೊಡ್ಡ ಯೋಗದಾನ ನೀಡಲಿದೆ ಎಂದು ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ರಾಮನ್ ಸ್ವಾತಿ ವಾಮನ್ ತಿಳಿಸಿರುವರು.


