ಕಾಸರಗೋಡು: ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರ(ಸಿ.ಪಿ.ಸಿ.ಆರ್.ಐ.) ಆಶ್ರಯದಲ್ಲಿ ವಿಶ್ವ ನಾಳಿಕೇರ ದಿನಾಚರಣೆ ಸೆ.2ರಂದು ನಡೆಯಲಿದೆ. ಕಾರ್ಯಕ್ರಮ ಅಂಗವಾಗಿ ವಿವಿಧ ಸಮಾರಂಭಗಳು ನಡೆಯಲಿವೆ. ರಾಜ್ಯ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು.
ಕೃಷಿ ಇಲಾಖೆಯ ಆರ್ಥಿಕ ಹಾಯದೊಂದಿಗೆ ಚಟುವಟಿಕೆ ನಡೆಸುವ ಅತ್ಯುತ್ತಮ ವಿಕೇಂದ್ರಿತ ತೆಂಗಿನಕಾಯಿ ನರ್ಸರಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಭಾರತೀಯ ಕೃಷಿ ಂಶೋಧನೆ ಮಂಡಳಿ ಸಹಾಯಕ ನಿರ್ದೇಶಜ ಜನರಲ್(ಹಾರ್ಟಿಕಲ್ಚರ್) ಡಾ.ಎ.ಕೆ.ಸಿಂಗ್ ಮುಖ್ಯ ಅತಿಥಿಯಾಗಿರುವರು. ತೆಂಗಿನ ಸಸಿಯ ವೈಜ್ಞಾನಿಕ ರೀತಿಯ ಪೆÇೀಷಣ, ತೆಂಗಿನಕಾಯಿ ನರ್ಸರಿ ಪೆÇೀಷಣೆ ಇತ್ಯಾದಿಗಳ ಸಂಬಂಧ ಪ್ರಕಟಿಸಲಾದ ಹೊತ್ತಗೆಗಳ ಬಿಡುಗಡೆ ನಡೆಯಲಿದೆ. ಮೌಲ್ಯಾಧರಿತ ತೆಂಗಿನಕಾಯಿ ಕೇಂದ್ರಿತ ಮಹಿಳಾ ಸ್ವಾಶ್ರಯ ಸಂಘಗಳಿಗಾಗಿ ನಡೆಸುವ ಉದ್ದಿಮೆ ಅಭಿವೃದ್ಧಿ ಕಾರ್ಯಕ್ರಮವನ್ನು ಲಕ್ಷದ್ವೀಪ ಕೃಷಿ ಇಲಾಖೆ ಕಾರ್ಯದರ್ಶಿ ಒ.ಪಿ.ಮಿಶ್ರಾ ಉದ್ಘಾಟಿಸುವರು. ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ.ಅನಿತಾ ಕರುಣ್ ಪ್ರಧಾನ ಭಾಷಣ ಮಾಡುವರು.


