HEALTH TIPS

ಬೀದಿಬದಿ ವ್ಯಾಪಾರಿಗಳು ಮಂಜೂರುಗೊಳಿಸಿರುವ ಸ್ಥಳದಲ್ಲಿ, ಸಮಯಾವಧಿಯಲ್ಲಿ ಮಾತ್ರ ವ್ಯಾಪಾರ ನಡೆಸಬೇಕು: ಎಸ್ಪಿ

  

       ಕಾಸರಗೋಡು: ಹಾದಿಬದಿ ವ್ಯಾಪಾರಿಗಳು ಮಂಜೂರುಗೊಳಿಸಿರುವ ಸ್ಥಳದಲ್ಲಿ, ಸಮಯಾವಧಿಯಲ್ಲಿ ಮಾತ್ರ ವ್ಯಾಪಾರ ನಡೆಸಬೇಕು ಎಂದು ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ತಿಳಿಸಿರುವರು. 

           ಯಾವ ಕಾರಣಕ್ಕೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಜನ ಗುಂಪು ಸೇರುವ ರೀತಿ ವ್ಯಾಪಾರ ನಡೆಸಕೂಡದು. ಹಾದಿಬದಿ ವ್ಯಾಪಾರ ವೇಳೆ ಸಾನಿಟೈಸರ್ ಗ್ರಾಹಕರಿಗೂ ಒದಗಿಸಬೇಕು ಎಂದವರು ನುಡಿದರು. 

        ಮಾರುಕಟ್ಟೆಗೆ, ಅಂಗಡಿಗೆ ತೆರಳುವ ಮಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅವು ಬಾಯಿ ಮತ್ತು ಮೂಗು ಪೂರ್ಣರೂಪದಲ್ಲಿ ಮುಚ್ಚುವಂತಿರಬೇಕು. ಸಾನಿಟೈಸರ್ ಯಥಾ ವೇಳೆ ಬಳಸುತ್ತಿರಬೇಕು. ಅಂಗಡಿಗಳಲ್ಲಿ ಜನನಿಭಿಡತೆ ಕಂಡುಬಂದಲ್ಲಿ ಟೋಕನ್ ವ್ಯವಸ್ಥೆಯ ಮೂಲಕ ಸಾಮಾಗ್ರಿ ಖರೀದಿಗೆ ವ್ಯವಸ್ಥೆ ಏರ್ಪಡಿಸಬೇಕು. ಮಾರುಕಟ್ಟೆಯ ಅಂಗಡಿಗಳಲ್ಲಿ ಏಕಕಾಲಕ್ಕೆ 6 ಮಂದಿಗಿಂತ ಅಧಿಕ ಗ್ರಾಹಕರು ಪ್ರವೇಶಿಸಕೂಡದು. ಅಂಗಡಿಗಳ ಹೊರಬದಿ ಕಾದು ನಿಂತವರೂ ಕೂಡ ಸೂಕ್ತ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಯ ಮಾಲೀಕರು ಈ ಬಗ್ಗೆ ಖಚಿತತೆ ಮೂಡಿಸಬೇಕು ಎಂದವರು ಸೂಚನೆ ನೀಡಿರುವರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries