HEALTH TIPS

ಮೀನು ಮಾರಾಟಗಾರರಿಗೆ ಕೋವಿಡ್ ತಪಾಸಣೆ: ಆರೋಗ್ಯ ಇಲಾಖೆಯಿಂದ ವಿಸ್ತೃತ ಸೌಲಭ್ಯ

      ಕಾಸರಗೋಡು: ಮೀನು ಮಾರಾಟಗಾರರಿಗೆ ಕೋವಿಡ್ ತಪಾಸಣೆ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಿಸ್ತೃತ ಸೌಲಭ್ಯ ಗಳನ್ನು ಏರ್ಪಡಿಸಿದೆ. 

      ಕಾಸರಗೋಡು ಜಿಲ್ಲೆಯ ಕರಾವಳಿ ವಲಯಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮೀನು ಮಾರಾಟಗಾರರು ಕೋವಿಡ್ ತಪಾಸಣೆಗೆ ಒಳಗಾಗಬೇಕು, ತಪಾಸಣೆಯ ಫಲಿತಾಂಶ ನೆಗೆಟಿವ್ ಆದಲ್ಲಿ ಮಾತ್ರ ಮಾರಾಟ ನಡೆಸಬಹುದಾಗಿದೆ ಎಂದು ಜಿಲ್ಲಾಡಳಿತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಂಟಿಜೆನ್ ತಪಾಸಣೆ ಸೌಲಭ್ಯ ಏರ್ಪಡಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. 

    ಕರಾವಳಿಯಿಂದ ಮೀನು ಮಾರಾಟಕ್ಕಾಗಿ ಇತರೆಡೆಗೆ ತೆರಳುವ ಮಂದಿ 21 ದಿನಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕು. ಇದರ ಅಂಗವಾಗಿ ಕಾಸರಗೋಡಯ ಜಿಲ್ಲೆಯ 5 ಕೇಂದ್ರಗಳಲ್ಲಿ ಪ್ರತ್ಯೇಕ ತಪಾಸಣೆ ಕೇಂದ್ರಗಳನ್ನು ಆರಂಬಿಸಲು ತೀರ್ಮಾನಿಸಲಾಗಿದೆ. ಕಾಸರಗೋಡು ಕಸಬ ಕರಾವಳಿ, ಕೋಟಿಕೊಳಂ, ಅಜಾನೂರು, ತೈಕಡಪ್ಪುರಂ, ಮಡಕ್ಕರ ಹಾರ್ಬರ್ ಗಳಲ್ಲಿ ಈ ತಪಾಸಣೆ ಕೇಂದ್ರಗಳು ಚಟುವಟಿಕೆ ನಡೆಸಲಿವೆ. ದಿನವೊಂದಕ್ಕೆ ಮೊದಲು ಹೆಸರುನೋಂದಣಿ ನಡೆಸುವ 50 ಮಂದಿಯನ್ನು ತಪಾಸಣೆಗೊಳಪಡಿಸಲಾಗುವುದು. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಈ ಕೇಂದ್ರಗಳು ಚಟುವಟಿಕೆ ನಡೆಸಲಿವೆ. 

     ಇತರ ಕರಾವಳಿಗಳ ಮೀನುಗಾರ ಕಾರ್ಮಿಕರು ಸಮೀಪದ ಕೇಂದ್ರಗಳಲ್ಲಿ ಆಂಟಿಜೆನ್ ತಪಾಸಣೆ ಸೌಲಭ್ಯ ಪಡೆದುಕೊಳ್ಳಬಹುದು. ನೂತನವಾಗಿ ನಿಗದಿಪಡಿಸಲಾದ ತಪಾಸಣೆ ಕೇಂದ್ರಗಳ ಹೊಣೆಗಾರಿಕೆ ಆಯಾ ಪ್ರದೇಶಗಳ ವೈದ್ಯಾಧಿಕಾರಿಗೆ ಮತ್ತು ಚಟುವಟಿಕೆಗಳ ಏಕೀಕಿರಣದ ಹೊಣೆ ಆರೋಗ್ಯ ಇನ್ಸ್ ಪೆಕ್ಟರರಿಗೆ ಇರುವುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries