ಕಾಸರಗೋಡು: ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಮನೆಗಳಲ್ಲಿ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ತಮ್ಮ ನಿಗಾ ಚುರುಕುಗೊಳಿಸಬೇಕು. ಮನೆಗಳ ಅಗತ್ಯದ ಎಲ್ಲ ಸೌಲಭ್ಯಗಳೂ(ಪ್ರತ್ಯೇಕ ಕೊಠಡಿ, ಶೌಚಾಲಯ ಸೌಕರ್ಯ ಸಹಿತ) ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತದನಂತರವಷ್ಟೇ ಈ ರೋಗಿಗಳು ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಾಗ್ರತಾ ಸಮಿತಿಗಳು ಜಿಲ್ಲಾ ವೈದ್ಯಾಧಿಕಾರಿಗೆ ಶಿಫಾರಸು ಮಾಡಬಹುದು.
ಕಾಸರಗೋಡು ಜಿಲ್ಲೆಯ ಎಲ್ಲ ನಗರಸಭೆ, ಗ್ರಾಮಪಂಚಾಯತ್ ಗಳೂ ತಮ್ಮ ಸ್ವಂತ ಯೋಜನೆ ನಿಧಿ ಬಳಸಿ ಕನಿಷ್ಠ 10 ಫಿಗರ್ ಟಿಪ್ ಪಲ್ಸ್ ಆಕ್ಸೀ ಮೀಟರ್ ಖರೀದಿಸಿ ಪುನರ್ ಬಳಕೆ ಕ್ರಮದಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಗಳಿಗೆ ತಾತ್ಕಾಲಿಕ ಬಳಕೆಗಾಗಿ ವಿತರಣೆ ನಡೆಸಬೇಕು. ಈ ಸಂಬಂಧ ನಗರಸಭೆ, ಗ್ರಾಮಪಂಚಾಯತ್ ಕಾರ್ಯದರ್ಶಿಗಳಿಗೆ ಹೊಣೆ ನೀಡಲಾಗಿದೆ. ಕೋವಿಡ್ ರೋಗಿಗಳು ಯಾವುದೇ ಕಾರಣಕ್ಕೆ ಇತರರನ್ನು ಸಂಪರ್ಕಿಸದಂತೆ ಪೆÇಲೀಸರು ಬಿಗಿ ನಿಗಾ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿರುವರು.
ರೋಗಲಕ್ಷಣ ಹೊಂದಿರುವ ಮತ್ತು ಹೊಂದದೇ ಇರುವ ಸೋಂಕು ಬಾಧಿತರು ಸರಕಾರಿ ವ್ಯವಸ್ಥೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ 10 ಸಿ.ಎಫ್.ಎಲ್.ಟಿ.ಸಿ. ಗಳಲ್ಲಿ 1090 ಹಾಸುಗೆಗಳಿರುವ ದಾಖಲಾತಿ ವ್ಯವಸ್ಥೆ ಇದೆ. ಹೆಚ್ಚುವರಿ ರೋಗಿಗಳನ್ನು ದಾಖಲಿಸಬೇಕಾಗಿ ಬಂದರೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.


