HEALTH TIPS

ಕೋವಿಡ್ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೆಂಟರ್ ಗಳಿಗೆ ಹೊಲಿಗೆ ಕಾರ್ಮಿಕರ ಸಹಾಯ ಹಸ್ತ

   

          ಕಾಸರಗೋಡು: ಕೋವಿಡ್ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೆಂಟರ್ ಗಳಿಗೆ ಹೊಲಿಗೆ ಕಾರ್ಮಿಕರು ಸಹಾಯ ಹಸ್ತ ನೀಡಿದ್ದಾರೆ. 

         ಅಖಿಲ ಕೇರಳ ಟೈಲರ್ಸ್ ಅಸೊಸಿಯೇಶನ್ ಜಿಲ್ಲಾ ಸಮಿತಿ ವತಿಯಿಂದ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಹಂತದ ಸಹಾಯ ಎಂಬ ರೀತಿಯಲ್ಲಿ ಕಾಸರಗೋಡು ಜಿಲ್ಲೆಯ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೆಂಟರ್ ಗಳಿಗೆ 240 ಹೊದಿಕೆಗಳು, 20 ಪಿ.ಪಿ.ಇ. ಕಿಟ್, 3 ಸಾವಿರ ಮಾಸ್ಕ್, 200 ಬಾಟಲಿ ಸಾನಿಟೈಸರ್, 20 ಪೆಕಟ್ ಬ್ಲೀಚಿಂಗ್ ಪೌಡರ್ ಇತ್ಯಾದಿ ವಿತರಣೆ ನಡೆಸಲಾಗಿದೆ. 

       ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರು ಈ ಸಾಮಾಗ್ರಿಗಳನ್ನು ಪಡೆದುಕೊಂಡರು. ಅಸೊಸಿಯೇಶನ್ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಕೆ.ವಿ.ರಾಮಚಂದ್ರನ್, ಕೆ.ಕುಂಞಂಬು, ಶಶಿಧರನ್, ಪೀತಾಂಬರನ್ ಉಪಸ್ಥಿತರಿದ್ದರು. 

     50 ಸಾವಿರ ಮಾಸ್ಕ್, 3 ಸಾವಿರ ಸಾಬಿಟೈಸರ್ ಬಾಟಲಿಗಳು(ತಲಾ 100 ಎಂಎಲ್.), 4 ಸಾವಿರ ಹೊದಿಕೆಗಳು, 300 ಪಿ.ಪಿ.ಇ. ಕಿಟ್, 300 ಪೆಕೆಟ್ ಬ್ಲೀಚಿಂಗ್ ಪೌಡರ್, 800 ತಲೆದಿಂಬು ಸಹಿತ 12,95,300 ರೂ.ನ ಸಾಮಾಗ್ರಿಗಳನ್ನು ರಾಜ್ಯದ 14 ಜಿಲ್ಲೆಗಳಲ್ಲೂ ವಿತರಣೆ ನಡೆಸಲು ಅಖಿಲ ಕೇರಳ ಟೈಲರ್ ಗಳ ಅಸೋಸಿಯೇಶನ್ ನಿರ್ಧರಿಸಿದ್ದು, ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಸಾಮಾಗ್ರಿಗಳ ವಿತರಣೆ ನಡೆಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries