ಕಾಸರಗೋಡು: ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರ ವ್ಯಾಪ್ತಿಯಲ್ಲಿ ಅಗ್ರಿ ಬಿಝಿನೆಸ್ ಇನ್ ಕ್ಯೂಬೇಟರ್ ಮತ್ತು ಕೇರಳ ಸ್ಟಾರ್ಟ್ ಅಪ್ ಮಿಷನ್ ಜಂಟಿಯಾಗಿ ನಡೆಸಿಕೊಂಡು ಬರುತ್ತಿರುವ ಕಲ್ಪ ಗ್ರೀನ್ಚಾಟ್ ವೆಬ್ ಸೀರೀಸ್ ಅಂಗವಾಗಿ ಆ.22ರಂದು ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ಕೃಷಿ ಸಂಶೋಧನೆ ಸಂಸ್ಥೆಗಳಾಗಿರುವ ಐ.ಐ.ಎಚ್.ಆರ್.(ಹಾರ್ಟಿ ಕಲ್ಚರ್) ಬೆಂಗಳೂರು, ಐ.ಐ.ವಿ.ಆರ್.(ತರಕಾರಿ) ವಾರಣಾಸಿ, ಐ.ಐ.ಎಸ್.ಆರ್(ಸುಗಂಧ ಧಾನ್ಯಗಳು) ಕೋಯಿಕೋಡ್, ಸಿ.ಟಿ.ಸಿ.ಆರ್.ಐ(ಗೆಡ್ಡೆ-ಗೆಣಸು) ತಿರುವನಂತಪುರಂ, ಎನ್.ಆರ್.ಸಿ.ಬಿ.(ಬಾಳೆಹಣ್ಣು) ತಿರುಚ್ಚಿರಪಳ್ಳಿ, ಡಿ.ಸಿ.ಆರ್.(ಗೇರುಬೀಜ) ಪುತ್ತೂರು ಕೇಂದ್ರಗಳ ಪರಿಣತರು ತಾಂತ್ರಿಕತೆ ಕೇಂದ್ರಿತ ಘಟಕ ಸಾಧ್ಯತೆಗಳ ತರಗತಿ ನಡೆಸುವರು. ಬೆಳಗ್ಗೆ 10.30ರಿಂದ ಆರಂಭಗೊಳ್ಳುವ ತರಬೇತಿಯಲ್ಲಿ ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರದ ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಮುರಳೀಧರನ್ ಸಮನ್ವಯಕಾರರಾಗಿರುವರು. ನೋಂದಣಿ ಮತ್ತು ಮಾಹಿತಿಗೆ ವೆಬ್ ಸೈಟ್ :www.cpcriagribiz.in ದೂರವಾಣಿ ನಂಬ್ರ: 8129182004.


