ಕಾಸರಗೋಡು: ಬಯೋಫ್ಲಾಕ್ ಮೀನುಕೃಷಿಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಬುಧವಾರ ನಡೆಯಿತು. ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಜಾರಿಗೊಳಿಸುವ ಕಾರ್ಯಕ್ರಮ ಇದಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಹಣಕಾಸು ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಸತೀಶನ್ ಪಿ.ವಿ.ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಇಲಾಖೆ ಸಬ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಪಿ.ಕೆ., ಯೋಜನೆಯ ಸಂಚಾಲಕಿ ಸುಷ್ಮಾ ವಿ., ಸುಭಿಕ್ಷ ಕೇರಳಂ ಯೋಜನೆಯ ನೋಡೆಲ್ ಅಧಿಕಾರಿ ಆದಿರಾ ಐ.ಪಿ., ಯೋಜನೆ ಪ್ರಮೋಟರ್ ಗಳಾದ ಶಕುಂತಲಾ, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.


