ಮಂಜೇಶ್ವರ: ಕೋವಿಡ್ ಸಂಕಷ್ಟದಿಂದ ದೇಶದ ಜನತೆ ಹಸಿವೆಯಿಂದ ಇರಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳಿಂದ ನವಂಬರ್ ತಿಂಗಳ ವರೆಗೆ ಉಚಿತವಾಗಿ ಪ್ರತಿ ಕುಟುಂಬ ಸದಸ್ಯರಿಗೆ 5 ಕಿಲೋ ದಂತೆ ಅಕ್ಕಿ ನೀಡುವ ಪ್ರಧಾನ ಮಂತ್ರಿ ಅಂತ್ಯೋದಯ ಯೋಜನೆಯ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕೇರಳದ ಕೆಲವು ಪಡಿತರ ಅಂಗಡಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ.
ಸ್ಥಳೀಯ ಜನತೆ ಇದರ ಬಗ್ಗೆ ಜಾಗ್ರತರಾಗಬೇಕು ಹಾಗೂ ಪ್ರಕರಣ ಕಂಡು ಬಂದಲ್ಲಿ ಮಾಹಿತಿ ನೀಡಲು ಅಥವಾ ಪೆÇಲೀಸ್ ಇಲಾಖೆಗೆ ತಿಳಿಸಲು ಬಿಜೆಪಿ ತಿಳಿಸಿದೆ.
ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಆರ್‍ಡಿ ನಂಬರ್ 2 ಪಡಿತರ ಅಂಗಡಿಯಲ್ಲಿ ಅದರ ಮಾಲೀಕ ಕದ್ದು ಮಾರಾಟ ಮಾಡಿದ ಬಡವರ ಅಕ್ಕಿಯ ಸಮಗ್ರ ತನಿಖೆಯಾಗಬೇಕು ಎಂದೂ ಬಿಜೆಪಿ ಕೇರಳ ಅಹಾರ ಇಲಾಖೆಯನ್ನು ಆಗ್ರಹಿಸಿದೆ.ಹಾಗೂ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿದೆ.
ಮಂಜೇಶ್ವರ ಪೆÇಲೀಸ್ ಅಧಿಕಾರಿಯ ಸಮಯೋಚಿತ ಕಾರ್ಯಚರಣೆ ಶ್ಲಾಘನೀಯ ಎಂದು ಬಿಜೆಪಿ ಅಭಿನಂದಿಸಿದೆ.
ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಆಡಳಿತ ಹಾಗೂ ಆಹಾರ ಇಲಾಖೆಯ ಪ್ರಮುಖರು ಪ್ರಯತ್ನಪಡುವ ವಿಚಾರ ಗಂಭೀರ ವಾದದ್ದು. ಕಳ್ಳರಿಗೆ ಬೆಂಬಲ ನೀಡುವ ರಾಜ್ಯ ಸರ್ಕಾರವೇ ಆಡಳಿತದಲ್ಲಿರುವಾಗ ಸ್ಥಳೀಯ ಕಳ್ಳರಿಗೆ ಇದುವೇ ಪ್ರೇರಣೆಯೇ ಎಂದು ಬಿಜೆಪಿ ಲೇವಡಿ ಮಾಡಿದೆ.


