ಕಾಸರಗೋಡು: ಕುಟುಂಬಶ್ರೀಯಲ್ಲಿ ಮೈಕ್ರೋ ಎಂಟರ್ ಪ್ರೈಸಸ್ ಕನ್ಸಲ್ಟೆಂಟ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಕೋರಲಾಗಿದೆ. ಪರಪ್ಪ ಬ್ಲೋಕ್ ನಲ್ಲಿ ಆರಂಭಿಸಲಾಗುವ ರೀಬಿಲ್ಡ್ ಕೇರಳ ಇನೀಶಿಯೇಟಿವ್ ಎಂಟರ್ ಪ್ರನರ್ ಶಿಪ್ ಡೆವೆಲಪ್ ಮೆಂಟ್ ಪೆÇ್ರೀಗ್ರಾಂ ನಲ್ಲಿ ನೇಮಕಾತಿ ನಡೆಯಲಿದೆ. ಎಂ.ಬಿ.ಸಿ.ಯಲ್ಲಿ 22 ಹುದ್ದೆಗಳು ಬರಿದಾಗಿವೆ. ಪ್ಲಸ್-ಟು, ಡಿಗ್ರಿ ಅರ್ಹತೆ ಇರುವ 45 ವರ್ಷ ಪ್ರಾಯ ಮೀರದೇ ಇರುವ ಮಂದಿ ಅರ್ಜಿ ಸಲ್ಲಿಸಬಹುದು.
ಬಿ.ಕಾಂ. ಅರ್ಹತೆಯಿರುವ ಟಾಲಿ, ಕಂಪ್ಯೂಟರ್ ಜ್ಞಾನ, ಮಲೆಯಾಳಂ ಭಾಷೆಯಲ್ಲಿ ಟೈಪಿಂಗ್ ಬಲ್ಲ 35 ವರ್ಷ ಮೀರದ ಮಂದಿ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಪರಪ್ಪ ಬ್ಲೋಕ್ ವ್ಯಾಪ್ತಿಯ ಕುಟುಂಬಶ್ರೀಯ ಸದಸ್ಯ ಯಾ ಕುಟುಂಬ ಸದಸ್ಯರಾಗಿರಬೇಕು. ಅರ್ಜಿಯೊಂದಿಗೆ ಅರ್ಹತಾಪತ್ರಗಳ ನಕಲು ಸಹಿತ ಕುಟುಂಬಶ್ರೀ ಸಿ.ಡಿ.ಎಸ್. ಕಚೇರಿಗೆ ಸೆ.4ರ ಮುಂಚಿತವಾಗಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994256111.


