HEALTH TIPS

ಪ್ರತಿರೋಧ ರಂಗದಲ್ಲಿ ಸಕ್ರಿಯವಾಗಿರುವ ಕೋವಿಡ್ ಬ್ರಿಗೇಡ್ ನ ಮೊದಲ ಬ್ಯಾಚ್

   

            ಕಾಸರಗೋಡು: ಕೋವಿಡ್  ಬ್ರಿಗೇಡ್ ನ ಮೊದಲ ಬ್ಯಾಚ್ ಪ್ರತಿರೋಧ ರಂಗದಲ್ಲಿ ಸಕ್ರಿಯವಾಗಿದೆ. 

           ಕೋವಿಡ್ ಸೋಂಕು ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳಿಗಾಗಿ ರಾಜ್ಯ ಸರಕಾರ ರಚಿಸಿರುವ ಕೋವಿಡ್ ಬ್ರಿಗೇಡ್ ನ ಮೊದಲ ಬ್ಯಾಚ್ ಈ ರೀತಿ ಕಾಸರಗೋಡು ಜಿಲ್ಲೆಯ ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ ಸಕ್ರಿಯವಾಗಿ ರಂಗದಲ್ಲಿದೆ. 

          ತಿರುವನಂತಪುರಂ ಮೆಡಿಕಲ್ ಕಾಲೇಜಿನ ನೇತೃತ್ವದಲ್ಲಿ ನಡೆಸಲಾದ 4 ದಿನಗಳ ಪ್ರತ್ಯೇಕ ತರಬೇತಿ ಪೂರ್ಣಗೊಳಿಸಿರುವ ಮೊದಲ ಬ್ಯಾಚ್ ನ 25 ಮಂದಿ ಆರೋಗ್ಯ ಕಾರ್ಯಕರ್ತರು, 12 ಸ್ಟಾಫ್ ನರ್ಸ್ ಗಳು, ತಲಾ 4 ಮಂದಿ ಪ್ರಯೋಗಾಲಯ ತಂತ್ರಜ್ಞರು, ಫಾರ್ಮಸಿಸ್ಟ್ ಗಳು ಈ ತಂಡದಲ್ಲಿದ್ದಾರೆ. 

         ಇವರನ್ನು ಜಿಲ್ಲೆಯ ಉದಯಗಿರಿ, ಮಂಜೇಶ್ವರ, ದೇಳಿ, ಪರವನಡ್ಕ, ಪಡನ್ನಕ್ಕಾಡ್ ಪ್ರದೇಶಗಳ ಸಿ.ಎಫ್.ಎಲ್.ಟಿ.ಸಿ. ಗಳಲ್ಲಿ ನೇಮಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿದರು. ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ಮೂಲಕ ನೋಂದಣಿ ನಡೆಸಿ ಸ್ವಯಂಸೇವೆಗೆ ಸಿದ್ಧರಾದ ಆರೋಗ್ಯ ಕಾರ್ಯಕರ್ತರನ್ನು ಸೇರಿಸಿ ರಾಜ್ಯ ಮಟ್ಟದಲ್ಲಿ ಕೋವಿಡ್ ಬ್ರಿಗೇಡ್ ರಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries